ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ರಾಯಭಾರಿ ವಿರುದ್ಧ ಹಕ್ಕುಚ್ಯುತಿ ಮಂಡನೆ
ಭಾರತದ ಸಂಸದರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಅಮೆರಿಕಕ್ಕೆ ಭಾರತದ ರಾಯಭಾರಿ ರೊನೆನ್ ಸೇನ್ ಅವರನ್ನು ಎನ್‌ಡಿಎ ಮತ್ತು ಎಡಪಕ್ಷಗಳು ತೀವ್ರವಾಗಿ ಖಂಡಿಸಿವೆ.

ರೊನೆನ್ ಸೇನ್ ಅವರನ್ನು ವಾಪಸು ಕರೆಸಿಕೊಂಡು ಸಂಸತ್ತಿನಲ್ಲಿ ಛೀಮಾರಿ ಹಾಕುವಂತೆ ಎನ್‌ಡಿಎ ಮತ್ತು ಎಡಪಕ್ಷಗಳು ಹಕ್ಕು ಚ್ಯುತಿ ನಿರ್ಣಯಗಳನ್ನು ಮಂಡಿಸಿವೆ.
ಚರ್ಚೆಯನ್ನು ಆರಂಭಿಸಿದ ಬಿಜೆಪಿ ನಾಯಕ ಯಶವಂತ ಸಿನ್ಹಾ,"ಭಾರತ-ಅಮೆರಿಕ ಪರಮಾಣು ಒಪ್ಪಂದವನ್ನು ವಿರೋಧಿಸಿದವರನ್ನು 'ತಲೆಕಡಿದ ಕೋಳಿಗಳು' ಎಂದು ರಾಯಭಾರಿ ಕರೆಯುವ ಮೂಲಕ ಅವರ ದೇಶಭಕ್ತಿ ಮತ್ತು ರಾಷ್ಟ್ರೀಯತೆ ಪ್ರಶ್ನಿಸಿದ್ದಾರೆಂದು ಆರೋಪಿಸಿದರು.

ಪ್ರಜಾಪ್ರಭುತ್ವದಲ್ಲಿ ಆಡಳಿತಶಾಹಿ ಗುರುತುಸಿಗದಂತೆ ಇರಬೇಕು. ಯಾವುದೇ ಪಕ್ಷದ ಪರ ವಹಿಸಬಾರದು. ಆದರೆ ರಾಯಭಾರಿಯ ಅವಹೇಳನಕಾರಿ ಮಾತುಗಳಿಂದ ಸದನದ ಗೌರವಕ್ಕೆ ಧಕ್ಕೆಯಾಗಿದೆ, ಸಂಸದರ ವರ್ಚಸ್ಸಿಗೆ ಕಳಂಕ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಹಕ್ಕುಚ್ಯುತಿ ನಿರ್ಣಯ ಅಂಗೀಕರಿಸಬೇಕೆಂದು ಅವರು ಆಗ್ರಹಿಸಿದರು.
ಮತ್ತಷ್ಟು
ಸಂಸತ್ತಿನಲ್ಲಿ ಜಪಾನ್ ಪ್ರಧಾನಿ ಭಾಷಣ
ಜಾ ಹತ್ಯೆ ಪ್ರಕರಣ: ಸೊರೆನ್ ಬಂಧಮುಕ್ತಿ
ಅಣು ಒಪ್ಪಂದ: 29-30ರಂದು ಲೋಕಸಭೆ ಚರ್ಚೆ
ತೈಲವಲಯದ ಅಧಿಕಾರಿಗಳ ಮುಷ್ಕರ ಅಂತ್ಯ
ಇಂದು ಸಂಜಯ್ ದತ್ ಬಿಡುಗಡೆ ಸಂಭವ
ಪರಮಾಣು ಶಕ್ತಿ ಅಭಿವೃದ್ಧಿಗೆ ಬದ್ಧ: ಪ್ರಧಾನಿ