ದೇಶಾದ್ಯಂತ ರೈಲ್ವೆ ನಿಲ್ದಾಣಗಳ ಹಳಿಗಳ ಸ್ವಚ್ಛತೆಗೆ ಚಿಂದಿಆಯುವವರ ಸೇವೆಯನ್ನು ಬಳಸಿಕೊಳ್ಳುವ ಮೂಲಕ ರೈಲ್ವೆ ಇಲಾಖೆ ಅರ್ಥಪೂರ್ಣ ದಾರಿಗಳನ್ನು ಹುಡುಕುತ್ತಿದೆ. ಸ್ವಚ್ಛತೆ ಕ್ರಮವಾಗಿ ರೈಲ್ವೆ ಮಾರ್ಗಗಳನ್ನು ಶುಚಿಗೊಳಿಸಲು ಗುತ್ತಿಗೆದಾರರ ಮೂಲಕ ಚಿಂದಿಆಯುವವರನ್ನು ನೇಮಿಸಿಕೊಳ್ಳುವಂತೆ ಎಲ್ಲ ವಿಭಾಗೀಯ ರೈಲ್ವೆ ಮ್ಯಾನೇಜರ್‌ಗಳಿಗೆ ಆದೇಶ ನೀಡಲಾಗಿದೆ.
ರೈಲ್ವೆ ನಿಲ್ದಾಣಗಳಲ್ಲಿ, ವೇಟಿಂಗ್ ಹಾಲ್‌ಗಳಲ್ಲಿ ಮತ್ತು ಪ್ರಯಾಣಿಕರ ರೈಲುಗಳಲ್ಲಿ ಸ್ವಚ್ಛತೆ ಖಾತರಿಗೆ ನಾವು ಕ್ರಮಗಳನ್ನು ಆರಂಭಿಸಿದ್ದು, ರೈಲ್ವೆ ಮಾರ್ಗಗಳಿಗೆ ಕೂಡ ಸ್ವಚ್ಛತೆ ಯೋಜನೆಯನ್ನು ವಿಸ್ತರಿಸಲಾಗಿದೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ರಮೇಶ್ ಚಂದ್ರ ತಿಳಿಸಿದರು.
ಕೊಳೆಗಳಿಂದ ತುಂಬಿದ ರೈಲ್ವೆ ಹಳಿಗಳು ಈಗ ಸಾಮಾನ್ಯ ದೃಶ್ಯವಾಗಿದೆ. ಸ್ವಚ್ಛತೆ ಕೆಲಸವನ್ನು ಖಾಸಗಿ ಗುತ್ತಿಗೆದಾರರಿಗೆ ವಹಿಸುವುದರಿಂದ ರೈಲು ಮಾರ್ಗಗಳು ಕಸಕಡ್ಡಿಮುಕ್ತವಾಗಿರುತ್ತದೆ.
"ಸ್ವಚ್ಛತೆ ಕೆಲಸಕ್ಕೆ ನಾವು ಗುತ್ತಿಗೆದಾರರನ್ನು ನೇಮಿಸಿಕೊಂಡಿದ್ದೇವೆ. ಪ್ಲಾಟ್‌ಫಾರಂನ ಎರಡೂ ಕಡೆ 50 ಮೀ.ವ್ಯಾಪ್ತಿಯೊಳಗಿರುವ ಪ್ಲಾಸ್ಟಿಕ್ ಬಾಟಲ್, ಪೇಪರ್, ಟೆಟ್ರಾ ಪ್ಯಾಕ್‌ಗಳು ಸೇರಿದಂತೆ ಕಸಕಡ್ಡಿಗಳನ್ನು ಹೆಕ್ಕುವ ಕೆಲಸವನ್ನು ಗುತ್ತಿಗೆದಾರರು ಚಿಂದಿಆಯುವವರಿಗೆ ವಹಿಸುತ್ತಾರೆ" ಎಂದು ಉತ್ತರ ರೈಲ್ವೆಯ ವಿಭಾಗೀಯ ರೈಲ್ವೆ ಮ್ಯಾನೇಜರ್ ರಾಕೇಶ್ ಸಕ್ಸೇನಾ ತಿಳಿಸಿದರು.
|