ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸೆ.18ರವರೆಗೆ ಕಾಯಲು ಎಡಪಕ್ಷಗಳ ನಿರ್ಧಾರ
ಕೇಂದ್ರ ಸರ್ಕಾರದ ಜತೆ ತಮ್ಮ ಸಂಬಂಧವನ್ನು ಯಥಾಸ್ಥಿತಿ ಮುಂದುವರಿಸುವುದೇ, ಬೇಡವೇ ಎಂಬ ನಿರ್ಧಾರವನ್ನು ಎಡಪಕ್ಷಗಳು ಸೆ. 18ರೊಳಗೆ ಕೈಗೊಳ್ಳುವ ನಿರೀಕ್ಷೆಯಿಲ್ಲ.

ಅಣುಶಕ್ತಿ ಆಯೋಗದ ಮುಖ್ಯಸ್ಥ ಅನಿಲ್ ಕಾಕೋಡ್ಕರ್ ಐಎಇಎ ಸಮಾವೇಶದಲ್ಲಿ ಭಾಗವಹಿಸಲು ಸೆ.18ರಂದು ವಿಯೆನ್ನಾಗೆ ತೆರಳಲಿರುವ ಹಿನ್ನೆಲೆಯಲ್ಲಿ ಯಾವುದೇ ಕ್ರಮವನ್ನು ಸೆ. 18ರ ಬಳಿಕವೇ ಕೈಗೊಳ್ಳಲಾಗುವುದು ಎಂದು ಸಿಪಿಎಂ ಮೂಲಗಳು ಗುರುವಾರ ಹೇಳಿವೆ.

ಕಾಕೋಡ್ಕರ್ ಕೇವಲ ಐಎಇಎ ಮಹಾಸಭೆಯಲ್ಲಿ ಮಾತ್ರ ಭಾಗವಹಿಸುತ್ತಾರೆಯೇ ಅಥವಾ ಪರಮಾಣು ಸುರಕ್ಷತೆ ಒಪ್ಪಂದ ಕುರಿತು ಸಹ ಚರ್ಚಿಸುತ್ತಾರೆಯೇ ಎಂದು ತಿಳಿಯಲು ಕಾಕೋಡ್ಕರ್ ಭೇಟಿಯನ್ನು ಎಡಪಕ್ಷಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ ಎಂದು ಮೂಲಗಳು ಹೇಳಿವೆ.

ಪರಮಾಣು ಒಪ್ಪಂದದ ಪ್ರಕಾರ, ಭಾರತ ಐಎಇಎ ಜತೆ ಸುರಕ್ಷತೆ ಒಪ್ಪಂದವನ್ನು ಕುರಿತು ಚರ್ಚಿಸಬೇಕಾಗಿದೆ, ಆದರೆ ಒಪ್ಪಂದದ ಅನುಷ್ಠಾನಕ್ಕೆ ಐಎಇಎ ಜತೆ ಮಾತುಕತೆ ನಡೆಸಬಾರದೆಂದು ಎಡಪಕ್ಷಗಳು ಷರತ್ತು ಹಾಕಿರುವ ಹಿನ್ನೆಲೆಯಲ್ಲಿ ಕಾಕೋಡ್ಕರ್ ಮಾತುಕತೆ ನಡೆಸುವುದು ಸ್ಪಷ್ಟವಾಗಿಲ್ಲ.

ಭಾರತ ಐಎಇಎ ಸಭೆಯಲ್ಲಿ ಭಾಗವಹಿಸಲು ತಮ್ಮ ಆಕ್ಷೇಪವಿಲ್ಲ.ಆದರೆ ಪರಮಾಣು ಸುರಕ್ಷತೆಗಳ ಒಪ್ಪಂದದ ಬಗ್ಗೆ ಚರ್ಚೆ ನಡೆಯಬಾರದೆಂದು ಎಡಪಕ್ಷಗಳು ಪ್ರತಿಪಾದಿಸಿವೆ.

ಮತ್ತಷ್ಟು
ಚಿಂದಿಆಯುವವರಿಗೆ ರೈಲ್ವೆ ಹಳಿ ಸ್ವಚ್ಛತೆ ಕೆಲಸ
ಜೈಲಿನಿಂದ ಸಂಜಯ್ ದತ್ ಬಿಡುಗಡೆ
ರಾಯಭಾರಿ ವಿರುದ್ಧ ಹಕ್ಕುಚ್ಯುತಿ ಮಂಡನೆ
ಸಂಸತ್ತಿನಲ್ಲಿ ಜಪಾನ್ ಪ್ರಧಾನಿ ಭಾಷಣ
ಜಾ ಹತ್ಯೆ ಪ್ರಕರಣ: ಸೊರೆನ್ ಬಂಧಮುಕ್ತಿ
ಅಣು ಒಪ್ಪಂದ: 29-30ರಂದು ಲೋಕಸಭೆ ಚರ್ಚೆ