ಭಾರತ-ಅಮೆರಿಕ ಪರಮಾಣು ಒಪ್ಪಂದವನ್ನು ವಿರೋಧಿಸುವ ಸಿಪಿಎಂ ಪಾಲಿಟ್‌ಬ್ಯೂರೊ ನಿರ್ಧಾರಕ್ಕೆ ಸಿಪಿಎಂನ ಕೇಂದ್ರ ಸಮಿತಿ ಗುರುವಾರ ಅಂಗೀಕಾರ ಮುದ್ರೆ ಒತ್ತುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ.
ಇದರ ಅರ್ಥವೇನೆಂದರೆ, ಸರ್ಕಾರ ಐಎಇಎ ಜತೆ ಮಾತುಕತೆ ಮುಂದುವರಿಸಿದ್ದೇ ಆದರೆ ಪಾಲಿಟ್‌ಬ್ಯೂರೊ ಸರ್ಕಾರಕ್ಕೆ ಬೆಂಬಲ ಹಿಂದೆಗೆತಕ್ಕೆ ನಿರ್ಧರಿಸಬಹುದು. ಆಗ ಪಾಲಿಟ್‌ಬ್ಯೂರೊಗೆ ಪಕ್ಷದ ಸಂಪೂರ್ಣ ಬೆಂಬಲವಿರುತ್ತದೆ.
"ಸರ್ಕಾರವನ್ನು ಅಭದ್ರಗೊಳಿಸುವ ಇಚ್ಛೆ ತಮಗಿಲ್ಲ ಎಂದು ಕೇಂದ್ರ ಸಮಿತಿ ಹೇಳಿದೆ. ಆದರೆ ಪಾಲಿಟ್‌ಬ್ಯೂರೊಗೆ ಈಗ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ" ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ತಿಳಿಸಿದರು.
ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ ಮತ್ತು ಪರಮಾಣು ಇಂಧನ ಪೂರೈಕೆ ರಾಷ್ಟ್ರಗಳ ಜತೆ ಸರ್ಕಾರ ಚರ್ಚೆ ಮುಂದುವರಿಸಿದರೆ ಗಂಭೀರ ಪರಿಣಾಸ ಎದುರಿಸಬೇಕಾಗುತ್ತದೆ ಎಂದು ಪಾಲಿಟ್‌ಬ್ಯೂರೊ ಎಚ್ಚರಿಸಿದೆ. ಎಡಪಕ್ಷಗಳು ಕೂಡ ಸೆ.1ರಿಂದ 16ರವರೆಗೆ ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಳ್ಳಲು ಯೋಜಿಸಿದೆ.
|