ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸಲ್ಮಾನ್‌ಖಾನ್ ಪ್ರಕರಣ: ಇಂದು ತೀರ್ಪು
ಸಂಜಯ್ ದತ್ ಜೈಲಿನಿಂದ ತತ್ಕಾಲಿಕ ಬಿಡುಗಡೆಗೊಂಡು ಹೊರಬಂದ ಮರುದಿನವೇ ಬಾಲಿವುಡ್ ಜಗತ್ತಿನಲ್ಲಿ ಮತ್ತೊಂದು ಕರಾಳ ಅಧ್ಯಾಯ ಆರಂಭವಾಗಲಿದ್ದು, ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಅವರಿಗೆ ಶುಕ್ರವಾರ ಜೋಧಪುರ್ ನ್ಯಾಯಾಲಯದಲ್ಲಿ ಮಹತ್ವದ ತೀರ್ಪು ಪ್ರಕಟವಾಗಲಿದೆ.

1998ರಲ್ಲಿ 'ಹಮ್ ಸಾಥ್ ಸಾಥ್ ಹೈ' ಚಿತ್ರೀಕರಣದ ಸಂದರ್ಭದಲ್ಲಿ ಜೋಧಪುರ ಸಮೀಪದ ಉಜಿಯಾಲಾ ಭಾಕಾರ್‌ನಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ ಪ್ರಕರಣವನ್ನು ಸಲ್ಮಾನ್ ಖಾನ್ ಎದುರಿಸುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜೋಧಪುರದ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, 5ವರ್ಷಗಳ ಜೈಲು ಶಿಕ್ಷೆ ಮತ್ತು 25 ಸಾವಿರ ರೂಪಾಯಿಗಳ ದಂಡವನ್ನು ವಿಧಿಸಿ, ತೀರ್ಪನ್ನು ನೀಡಿತ್ತು.

ಈ ತೀರ್ಪನ್ನು ಪ್ರಶ್ನಿಸಿ, ಸಲ್ಮಾನ್ ಖಾನ್ ಜಿಲ್ಲಾ ನ್ಯಾಯಾಲಯಕ್ಕೆ ಹೋಗಿದ್ದರು. ಈ ಕುರಿತು ಇಂದು ಮಹತ್ವದ ತೀರ್ಪು ಹೊರಬೀಳಲಿದ್ದು, ಬಾಲಿವುಡ್ ಜಗತ್ತಿನ ಮೇಲೆ ಆತಂಕದ ಛಾಯೆ ಮೂಡಿದೆ.

ನ್ಯಾಯಾಲಯಕ್ಕೆ ಹಾಜರಾಗುವ ಸಲುವಾಗಿ ಸಲ್ಲು ಭಾಯ್ ಗುರುವಾರ ಸಂಜೆಯೇ ನಗರಕ್ಕೆ ಆಗಮಿಸಿದ್ದು, ಜೋಧಪುರ್ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಆರ್. ಸಾಂಘ್ವಿ, ಈ ಪ್ರಕರಣದ ಕುರಿತು ಮಹತ್ವದ ತೀರ್ಪು ನೀಡಲಿದ್ದಾರೆ.
ಮತ್ತಷ್ಟು
ಯುಎಇನಲ್ಲಿ ಸಿಕ್ಕಿಬಿದ್ದ 2 ಲಕ್ಷ ಭಾರತೀಯರು
ಸರ್ಕಾರಕ್ಕೆ ಸಿಪಿಎಂ ಎಚ್ಚರಿಕೆ
ಸೆ.18ರವರೆಗೆ ಕಾಯಲು ಎಡಪಕ್ಷಗಳ ನಿರ್ಧಾರ
ಚಿಂದಿಆಯುವವರಿಗೆ ರೈಲ್ವೆ ಹಳಿ ಸ್ವಚ್ಛತೆ ಕೆಲಸ
ಜೈಲಿನಿಂದ ಸಂಜಯ್ ದತ್ ಬಿಡುಗಡೆ
ರಾಯಭಾರಿ ವಿರುದ್ಧ ಹಕ್ಕುಚ್ಯುತಿ ಮಂಡನೆ