ಚಿಂಕಾರಾ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳನ್ಯಾಯಾಲಯ ವಿಧಿಸಿದ್ದ ಐದು ವರ್ಷಗಳ ಜೈಲು ಶಿಕ್ಷೆ ವಿರುದ್ಧ ಬಾಲಿವುಡ್ ಚಿತ್ರನಟ ಸಲ್ಮಾನ್ ಖಾನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಜೋಧ್‌ಪುರದ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಇದರಿಂದಾಗಿ ಸಲ್ಮಾನ್ ಖಾನ್ ಇಕ್ಕಟ್ಟಿಗೆ ಸಿಕ್ಕಿಬಿದ್ದಿದ್ದು, ಅವರ ವಿರುದ್ಧ ಬಂಧನದ ವಾರಂಟ್ ಜಾರಿಯಾಗಲಿದೆ. ಸಲ್ಮಾನ್ ಸೋಮವಾರ ಶರಣಾಗುವರೆಂದು ನಿರೀಕ್ಷಿಸಲಾಗಿದ್ದು, ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆಗೆ ಕೋರ್ಟ್ ಅವಕಾಶ ನೀಡಿದೆ. ಕಳೆದ ವರ್ಷ ಏಪ್ರಿಲ್ 10ರಂದು ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಬ್ರಿಜೇಂದ್ರ ಕುಮಾರ್ ಜೈನ್ ಕೃಷ್ಣಮೃಗಗಳ ಕಳ್ಳಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್‌ಗೆ ಐದು ವರ್ಷಗಳ ಕಾರಾಗೃಹ ಶಿಕ್ಷೆಯ ಜತೆಗೆ 25, 000 ರೂ. ದಂಡವನ್ನು ವಿಧಿಸಿದ್ದರು. ಸಲ್ಮಾನ್ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು.
1998ರ ಸೆ.28ರಂದು 'ಹಮ್ ಸಾಥ್ ಸಾಥ್ ಹೈನ್' ಹಿಂದಿ ಸಾಕ್ಷ್ಯ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಘೋಡಾ ಫಾರ್ಮ್ ಬಳಿಯ ಉಜಿಯಾಲಾ ಭಾಕರ್‌ನಲ್ಲಿ ಸಲ್ಮಾನ್ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ ಆರೋಪವನ್ನು ಹೊರಿಸಲಾಗಿತ್ತು,
ಭಾವಾಡ್‌ನಲ್ಲಿ ಇನ್ನೊಂದು ಕಳ್ಳಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಈ ತೀರ್ಪಿನ ವಿರುದ್ಧ ಕೂಡ ಸಲ್ಮಾನ್ ಮೇಲ್ಮನವಿ ಸಲ್ಲಿಸಿದ್ದಾರೆ.
|