ತನ್ನ ಆಕ್ಷೇಪಾರ್ಹ ಛಾಯಾಚಿತ್ರವನ್ನು ಪ್ರಸಾರ ಮಾಡದಂತೆ ಮಾಧ್ಯಮವನ್ನು ನಿರ್ಬಂಧಿಸಬೇಕೆಂದು ಕೋರಿ ಬಾಲಿವುಡ್ ನಟಿ ಮತ್ತು ಅಬು ಸಲೇಂ ಗೆಳತಿ ಮೋನಿಕಾ ಬೇಡಿ ಶುಕ್ರವಾರ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾಳೆ.ಪಾಸ್‌ಪೋರ್ಟ್ ನಕಲು ಪ್ರಕರಣಕ್ಕೆ ಸಂಬಂಧಿಸಿದಂತೆ ಭೋಪಾಲ್ ಜೈಲಿನಲ್ಲಿದ್ದಾಗ ರಹಸ್ಯ ಕ್ಯಾಮರಾ ಬಳಸಿ ಛಾಯಾಚಿತ್ರ ತೆಗೆಯಲಾಗಿದೆಯೆಂದು ಆರೋಪಿಸಲಾಗಿದೆ.
ಈ ವಿಷಯವನ್ನು ಪೀಠದ ಮುಂದೆ ಪ್ರಸ್ತಾಪಿಸಿದ ಮೋನಿಕಾ ವಕೀಲ ಕೆ.ಟಿ.ಎಸ್. ತುಳ್ಸಿ, ಖಾಸಗಿ ಟಾವಿ ಚಾನೆಲ್ಲೊಂದು ನಟಿಯು ಸ್ನಾನಗೃಹದಲ್ಲಿದ್ದಾಗ ರಹಸ್ಯ ಕ್ಯಾಮರಾದಿಂದ ತೆಗೆದ ಆಕ್ಷೇಪಾರ್ಹ ಚಿತ್ರವನ್ನು ಪ್ರಸಾರ ಮಾಡಿದೆ ಎಂದು ಆರೋಪಿಸಿದರು. ಇಂತಹ ಅಶ್ಲೀಲ ಚಿತ್ರವನ್ನು ಬೇರೆ ಚಾನೆಲ್‌ಗಳು ಪ್ರಸಾರ ಮಾಡದಂತೆ ನಿರ್ಬಂಧಿಸಲು ಪೀಠಕ್ಕೆ ತಾವು ನೇರ ಪ್ರಸ್ತಾಪ ಮಾಡಿದ್ದಾಗಿ ಅವರು ಹೇಳಿದರು. ಪಾಸ್‌ಪೋರ್ಟ್ ನಕಲು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯನ್ನು ಭೋಪಾಲ್ ಕೋರ್ಟೊಂದು ಖುಲಾಸೆ ಮಾಡಿತ್ತು. ಇದೇ ರೀತಿಯ ಇನ್ನೊಂದು ಪ್ರಕರಣದಲ್ಲಿ ಕೋರ್ಟ್‌ನಿಂದ ಜಾಮೀನು ಪಡೆದು ಹೈದರಾಬಾದ್ ಜೈಲಿನಿಂದ ಆಕೆ ಬಿಡುಗಡೆಯಾಗಿದ್ದಾಳೆ.
|