ಸಾಸಿವೆ ಖರೀಧಿಯಲ್ಲಿ ನ್ಯಾಷನಲ್ ಅಗ್ರಿಕಲ್ಚರಲ್ ಮಾರ್ಕೆಟಿಂಗ್ ಪೆಡರೆಷನ್ ಆಫ್ ಇಂಡಿಯಾ (ನಾಫೆಡ್) ಅಧಿಕಾರಿಗಳು ಅವ್ಯವಹಾರ ಎಸಗಿದ್ದು ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲಿಸುವಂತೆ ದೆಹಲಿ ಉಚ್ಚನ್ಯಾಯಾಲಯ ನಿರ್ದೇಶಿಸಿದೆ.
ಲೆಕ್ಕ ಮಹಾ ಪರಿಶೋಧಕರ ವರದಿಯಲ್ಲಿ ನಾಫೆಡ್ ಅಧಿಕಾರಿಗಳು 900 ಕೋಟಿ ರೂಗಳ ಅವ್ಯವಹಾರ ಎಸಗಿದ್ದಾರೆ ಎಂಬುದು ಸಾಬಿತಾಗಿದೆ. ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಎಂ ಕೆ ಶರ್ಮಾ ಮತ್ತು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ಒಳಗೊಂಡ ವಿಭಾಗಿಯ ಪೀಠವು, ಡಿಸೆಂಬರ್ 19ರಂದು ಫೀಠದ ಎದುರು ಹಾಜರಾಗಬೇಕು ಎಂದು ಸಿಬಿಐಗೆ ನಿರ್ದೇಶಿಸಿ, ತಪ್ಪಿತಸ್ಥ ಅಧಿಕಾರಿಗಳನ್ನು ಜೈಲಿಗೆ ತಳ್ಳುವಂತೆ ಹೇಳಿತು.
ಇದಕ್ಕೂ ಮೊದಲು ಮಹಾಲೆಕ್ಕ ಪರಿಶೋಧಕರ ಕಾರ್ಯಾಲಯದ ಉಪನಿರ್ದೇಶಕರು, ಪೀಠದ ಎದುರು ಹಾಜರಾಗಿ, ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಅಗತ್ಯಕ್ಕಿಂತ ಹೆಚ್ಚಿಗೆ ಸಾಸಿವೆಯನ್ನು ಖರೀಧಿಸಲಾಗಿದ್ದು, ಇದರಿಂದ ಸರಕಾರಕ್ಕೆ ನಷ್ಟವಾಗಿದೆ ಎಂದು ಸಲ್ಲಿಸಿದ 61 ಪುಟಗಳ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತು.
ಸಾಸಿವೆಯನ್ನು ಬೊಗಸ್ ವ್ಯಕ್ತಿಗಳಿಂದ ಖರೀಧಿಸಲಾಗಿದ್ದು ಖರೀದಿ ದಾಖಲೆಯಲ್ಲಿ ಇರುವ ಹೆಸರುಗಳು ಖೋಟ್ಟಿ ಎಂದು ಮಹಾ ಲೆಕ್ಕ ಪರಿಶೋಧಕರ ಕಾರ್ಯಾಲಯ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ.
|