ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ನಾಪತ್ತೆಯಾದ ಸಲ್ಮಾನ್ ಖಾನ್
ಚಿಂಕಾರಾ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದ ವಾರಂಟ್ ಜಾರಿಯಾದ ಬಳಿಕ ಬಾಲಿವುಡ್ ನಟ ಸಲ್ಮಾನ್ ಖಾನ್ ಕಣ್ಮರೆಯಾಗಿದ್ದಾರೆ. ಬಾಂದ್ರಾದಲ್ಲಿರುವ ಸಲ್ಮಾನ್ ನಿವಾಸಕ್ಕೆ ಮಾಡಿದ ಕರೆಗಳು ನಿಷ್ಫಲವಾಗಿದ್ದು, ಸಲ್ಮಾನ್‌ನ ಬಹುತೇಕ ಸ್ನೇಹಿತರು ಸಂಪರ್ಕರಹಿತರಾದರು.

ಸಲ್ಮಾನ್ ಗುರುವಾರ ರಾತ್ರಿಯೇ ಮುಂಬೈಯನ್ನು ಬಿಟ್ಟು ಹೈದರಾಬಾದ್‌ಗೆ ತೆರಳಿದ್ದಾರೆಂಬ ಊಹಾಪೋಹಗಳು ದಟ್ಟವಾಗಿವೆ. ಆದರೆ ಅವರ ಕುಟುಂಬ ಇದನ್ನು ಖಚಿತಪಡಿಸುತ್ತಿಲ್ಲ.

ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕಮಲ್ ರಾಜ್ ಸಿಂಘ್ವಿ ಸಲ್ಮಾನ್ ಮನವಿಯನ್ನು ತಿರಸ್ಕರಿಸಿದಾಗ ಕಿಕ್ಕಿರಿದು ನೆರೆದಿದ್ದ ಕೋರ್ಟ್‌ನಲ್ಲಿ ಸಲ್ಮಾನ್ ಹಾಜರಿರಲಿಲ್ಲ. ಇದಕ್ಕೆ ಮುಂಚೆ, ಜೋಧ್‌ಪುರ ಕೋರ್ಟೊಂದು ಸಲ್ಮಾನ್ ಮೇಲ್ಮನವಿಯನ್ನು ತಿರಸ್ಕರಿಸಿತ್ತು.

ಬಂಧನದ ವಾರಂಟ್ ಜಾರಿ ಮಾಡುವಾಗ ಸಲ್ಮಾನ್ ರಾಜಸ್ಥಾನ ಹೈಕೋಟ್‌ನಲ್ಲಿ ಮೇಲ್ಮನವಿ ಸಲ್ಲಿಸಬಹುದೆಂದು ಹೇಳಿತ್ತು. ಸಲ್ಮಾನ್ ಪರ ವಕೀಲರು ಸೆಷನ್ಸ್ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ 10 ದಿನಗಳವರೆಗೆ ವಾರಂಟ್‌ಗೆ ವಿನಾಯಿತಿ ನೀಡಬೇಕೆಂದು ಸಲ್ಲಿಸಿದ ಕೋರಿಕೆಯನ್ನು ಸೆಷನ್ಸ್ ಕೋರ್ಟ್ ತಿರಸ್ಕರಿಸಿತ್ತು
ಮತ್ತಷ್ಟು
ಕೋಮುಗಲಭೆ: ತಪ್ಪಿತಸ್ಥರಿಗೆ ಶಿಕ್ಷೆ
ನಾಫೆಡ್‌ ಅಧಿಕಾರಿಗಳಿಂದ 900 ಕೋಟಿ ಗುಳುಂ
ಸುಪ್ರೀಂಕೋರ್ಟ್‌ಗೆ ಮೊರೆ ಹೋದ ಮೋನಿಕಾ
ನಟ ಸಲ್ಮಾನ್ ಖಾನ್ ಮೇಲ್ಮನವಿ ತಿರಸ್ಕೃತ
ಸಲ್ಮಾನ್‌ಖಾನ್ ಪ್ರಕರಣ: ಇಂದು ತೀರ್ಪು
ಯುಎಇನಲ್ಲಿ ಸಿಕ್ಕಿಬಿದ್ದ 2 ಲಕ್ಷ ಭಾರತೀಯರು