ಬಾಲಿವುಡ್ ಚಿತ್ರನಟ ಸಲ್ಮಾನ್ ಖಾನ್ ನಾಪತ್ತೆಯಾಗಿದ್ದಾನೆಂಬ ಊಹಾಪೋಹಗಳ ನಡುವೆ, ಸಲ್ಮಾನ್ ಮುಂಬೈನಲ್ಲೇ ತಂಗಿದ್ದು, ರಾಜಸ್ಥಾನದಲ್ಲಿ ಸೋಮವಾರ ಶರಣಾಗುತ್ತಾನೆಂದು ಅವನ ವಕೀಲರು ಸ್ಪಷ್ಟಪಡಿಸಿದ್ದಾರೆ.
ಸಲ್ಮಾನ್‌ಗೆ ಕೋರ್ಟ್‌ನಲ್ಲಿ ಉಪಸ್ಥಿತನಿರಬೇಕೆಂಬ ಆದೇಶ ಇಲ್ಲದಿರುವುದರಿಂದ ಹಾಜರಾಗಲಿಲ್ಲ ಎಂದು ಅವನ ಪರ ವಕೀಲ ದೀಪೇಶ್ ಮೆಹ್ತಾ ತಿಳಿಸಿದರು. ಕೋರ್ಟ್ ಆದೇಶ 76 ಪುಟಗಳಷ್ಟು ಸುದೀರ್ಘವಾಗಿದೆ. ಅದನ್ನು ನಾವು ಓದಿ, ರಾಜಸ್ಥಾನ ಹೈಕೋರ್ಟ್‌ನಲ್ಲಿ ಸೋಮವಾರ ಪುನರ್ಪರಿಶೀಲನಾ ಅರ್ಜಿ ಸಲ್ಲಿಸುತ್ತೇವೆ. ಸಲ್ಮಾನ್ ನಮ್ಮ ಜತೆ ಜೋಧ್ಪುರಕ್ಕೆ ತೆರಳಿ ಶರಣಾಗುತ್ತಾನೆಂದು ವಕೀಲ ದೀಪೇಶ್ ಮೆಹ್ತಾ ತಿಳಿಸಿದರು.
ನಟನಿಗೆ ಕಳೆದ ವರ್ಷ ಶಿಕ್ಷೆ ವಿಧಿಸಿದ ಮುಖ್ಯ ಜುಡಿಷಿಯಲ್ ಮ್ಯಾಜಿಸ್ರ್ಟೇಟ್ ಕೋರ್ಟ್ ಶುಕ್ರವಾರ ಮಧ್ಯಾಹ್ನ ಜಾಮೀನು ರಹಿತ ಬಂಧನದ ವಾರಂಟ್ ಹೊರಡಿಸಿ ಅದರ ಜಾರಿಗೆ ಪೊಲೀಸರಿಗೆ ಕಳುಹಿಸಿದೆ. ಅವನು ಸೆಷನ್ಸ್ ಕೋರ್ಟ್‌ನಲ್ಲಿ ಹಾಜರಿಲ್ಲದಿದ್ದರಿಂದ ತಕ್ಷಣದ ಬಂಧನದಿಂದ ತಪ್ಪಿಸಿಕೊಂಡಿದ್ದಾನೆ
. ಸಲ್ಮಾನ್ ವಿರುದ್ಧ ನೀಡಿದ ತೀರ್ಪಿನಲ್ಲಿ ಶಿಕ್ಷೆಯ ವಿರುದ್ಧ ಮೇಲ್ಮನವಿಗೆ ನೀಡಿದ ಕಾರಣಗಳು ಆಧಾರರಹಿತ ಎಂದು ನ್ಯಾಯಾಧೀಶ ಸಿಂಘ್ವಿ ಬಣ್ಣಿಸಿದ್ದಾರೆ. ನ್ಯಾಯಾಧೀಶರು ಸಲ್ಮಾನ್ ಜಾಮೀನು ಬಾಂಡನ್ನು ಮುಟ್ಟುಗೋಲು ಹಾಕಿಕೊಂಡು ಶರಣಾಗುವಂತೆ ಆದೇಶಿಸಿದಾಗ ಅವನ ಸಹೋದರಿ ಅಲ್ವಿರಾ ಕೋರ್ಟ್‌ನಲ್ಲಿ ಹಾಜರಿದ್ದರು.
ಶರಣಾಗಲು ಕಾಲಾವಕಾಶ ನೀಡಬೇಕೆಂದು ಸಲ್ಮಾನ್ ವಕೀಲ ಸಲ್ಲಿಸಿದ ಅರ್ಜಿಯನ್ನು ಕೂಡ ನ್ಯಾಯಾಧೀಶರು ತಿರಸ್ಕರಿಸಿದರು.
|