ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಎಡ ಧೋರಣೆಗೆ ಸಿಪಿಐ-ಎಂಎಲ್ ಟೀಕೆ
ಭಾರತ-ಅಮೆರಿಕ ಪರಮಾಣು ಒಪ್ಪಂದದ ಬಗ್ಗೆ ಎಡಪಕ್ಷಗಳು ಮೃದುಧೋರಣೆ ತಾಳುತ್ತಿವೆ ಎಂದು ಸಿಪಿಐ-ಎಂಎಲ್ ಟೀಕಿಸಿದೆ. ಈ ಒಪ್ಪಂದ ರಾಷ್ಟ್ರೀಯ ಹಿತಾಸಕ್ತಿಗೆ ಮಾರಕವಾಗಿದೆ. ಈ ಹಿನ್ನೆಲೆಯಲ್ಲಿ ಒಪ್ಪಂದಕ್ಕೆ ವಿರೋಧ ಸೂಚಿಸಲು ಶನಿವಾರ ಸಂಸತ್ ಚಲೊ ಸೇರಿದಂತೆ ರಾಷ್ಟ್ರವ್ಯಾಪಿ ಆಂದೋಳನ ಆರಂಭಿಸುವುದಾಗಿ ಅದು ತಿಳಿಸಿದೆ.

ಇಂತಹ ಸೂಕ್ಷ್ಮ ವಿಷಯದ ಬಗ್ಗೆ ಸಂಸತ್ತಿನಲ್ಲಿ ವಿಸ್ತೃತ ಚರ್ಚೆಯನ್ನು ಯುಪಿಎ ಸರ್ಕಾರ ಬಯಸುತ್ತಿಲ್ಲ. ಆಶ್ಚರ್ಯವೆಂದರೆ ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳುವುದಾಗಿ ಆಗಿಂದಾಗ್ಗೆ ಬೆದರಿಕೆ ಹಾಕುವ ನಾಟಕದ ಮೂಲಕ ಎಡಪಕ್ಷಗಳು ಇಬ್ಬಗೆಯ ನೀತಿ ಅನುಸರಿಸುತ್ತಿವೆ ಎಂದು ಸಿಪಿಐ-ಎಂಎಲ್ ರಾಷ್ಟ್ರೀಯ ಕಾರ್ಯದರ್ಶಿ ಕೆ.ಎನ್. ರಾಮಚಂದ್ರನ್ ಟೀಕಿಸಿದರು.

ಒಪ್ಪಂದವನ್ನು ವಿರೋಧಿಸುತ್ತಿರುವ ಸಿಪಿಎಂ ಪಾತ್ರಾಭಿನಯವನ್ನು ಅವರು ಪ್ರಶ್ನಿಸಿದರು. ವಿಯೆನ್ನಾದ ಐಎಇಎ ಮಹಾ ಸಭೆಯಲ್ಲಿ ಅಣುಶಕ್ತಿ ಆಯೋಗದ ಅಧ್ಯಕ್ಷ ಅನಿಲ್ ಕಾಕೋಡ್ಕರ್ ಪರಮಾಣು ಒಪ್ಪಂದದ ಬಗ್ಗೆ ಚರ್ಚಿಸುತ್ತಾರೆಯೇ ಎಂದು ಎಡಪಕ್ಷಗಳು ಕಾಯುತ್ತಾ ಕುಳಿತಿರುವುದೇಕೆಂದು ಅವರು ಪ್ರಶ್ನಿಸಿದರು.

ಒಪ್ಪಂದವನ್ನು ಅನುಷ್ಠಾನಗೊಳಸುವ ಪ್ರಕ್ರಿಯೆ ನಿಲ್ಲಿಸಲು ಸರ್ಕಾರಕ್ಕೆ ಒತ್ತಾಯ ಬರೀ ಕಣ್ಣೊರೆಸುವ ತಂತ್ರ. ಎಡಪಕ್ಷಗಳು ತಮ್ಮ ರಾಜಕೀಯ ಭವಿತವ್ಯದ ಬಗ್ಗೆ ಹೆಚ್ಚು ಆಸಕ್ತಿತವಾಗಿದೆ ಎಂದು ಅವರು ಟೀಕಿಸಿದರು. ಇಂತಹ ವಿಷಯಗಳ ಬಗ್ಗೆ ಗಟ್ಟಿಧ್ವನಿಯಲ್ಲಿ ಪ್ರತಿಭಟಿಸುತ್ತಿದ್ದ ಬಿಜೆಪಿ ಕೂಡ ಗಮನಸೆಳೆಯಲು ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಮತ್ತಷ್ಟು
ಸಲ್ಮಾನ್ ಸೋಮವಾರ ಶರಣು
ನಾಪತ್ತೆಯಾದ ಸಲ್ಮಾನ್ ಖಾನ್
ಕೋಮುಗಲಭೆ: ತಪ್ಪಿತಸ್ಥರಿಗೆ ಶಿಕ್ಷೆ
ನಾಫೆಡ್‌ ಅಧಿಕಾರಿಗಳಿಂದ 900 ಕೋಟಿ ಗುಳುಂ
ಸುಪ್ರೀಂಕೋರ್ಟ್‌ಗೆ ಮೊರೆ ಹೋದ ಮೋನಿಕಾ
ನಟ ಸಲ್ಮಾನ್ ಖಾನ್ ಮೇಲ್ಮನವಿ ತಿರಸ್ಕೃತ