ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸಲ್ಮಾನ್ ಖಾನ್‌ಗೆ ಸೆರೆಮನೆ
PTI
ಬಾಲಿವುಡ್ ನಟ ಸಲ್ಮಾನ್ ಖಾನ್ ಶರಣಾಗತಿಯಾಗಲು ಶುಕ್ರವಾರ ಮುಂಬೈನಿಂದ ಹೊರಟು ಜೋಧ್‌ಪುರದ ವಿಮಾನನಿಲ್ದಾಣದಲ್ಲಿ ಇಳಿದ ಸ್ವಲ್ಪಹೊತ್ತಿನಲ್ಲೇ ಬಂಧಿಸಿ ಜೈಲಿಗೆ ಕಳಿಸಲಾಯಿತು.

ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ ಸವಾಯ್ ಸಿಂಗ್ ಗೊಧಾರಾ ನೇತೃತ್ವದ ಪೊಲೀಸ್ ತಂಡವೊಂದು ಸಲ್ಮಾನ್ ಖಾನ್‌ನನ್ನು ವಿಮಾನದಿಂದ ಇಳಿಯುತ್ತಿದ್ದಂತೆ ಬಂಧಿಸಿದರು.

ಸಹೋದರ ಸೊಹೇಲ್ ಮತ್ತು ವಕೀಲ ದಿಪೇಶ್ ಮೆಹ್ತಾ ಜತೆಗೂಡಿದ್ದ ಸಲ್ಮಾನ್ ಜೆಟ್ ಏರ್‌ವೇಸ್ ವಿಮಾನದಲ್ಲಿ ಇಲ್ಲಿಗೆ ಆಗಮಿಸಿದ್ದರು.ಸಲ್ಮಾನ್ ಶರಣಾಗಲು ಇಚ್ಛಿಸಿದ್ದನೆಂದು ಅವನ ವಕೀಲರು ವಾದಿಸಿದರೂ ಕೇಳದ ಪೊಲೀಸರು ತಮ್ಮ ಬಳಿ ಕೋರ್ಟ್ ವಾರಂಟ್ ಇದ್ದು ಅದನ್ನು ಜಾರಿಮಾಡಬೇಕೆಂದು ಹೇಳಿದರು.

ಬಿಳಿ ಟೀ ಶರ್ಟ್, ಕಾರ್ಗೊ ಪ್ಯಾಂಟ್ ಮತ್ತು ಸ್ಪೋರ್ಟಿಂಗ್ ಕನ್ನಡಕ ಧರಿಸಿದ್ದ ಸಲ್ಮಾನ್‌ನನ್ನು ಪೊಲೀಸ್ ಜೀಪಿನಲ್ಲಿ ಕರೆದುಕೊಂಡು ಹೋಗಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್(ಸಿಜೆಎಂ) ಎದುರು ಹಾಜರುಪಡಿಸಲಾಯಿತು.

ಸೆಷನ್ಸ್ ಕೋರ್ಟ್ ತೀರ್ಪಿನ ವಿರುದ್ಧ ರಾಜಸ್ಥಾನ ಹೈಕೋರ್ಟಿನ ಜೋಧಪುರ ಪೀಠದಲ್ಲಿ ಶನಿವಾರವೇ ಮೇಲ್ಮನವಿ ಸಲ್ಲಿಸಲು ಸಲ್ಮಾನ್ ವಕೀಲರು ನಿರ್ಧರಿಸಿದರು. 41 ವರ್ಷ ಪ್ರಾಯದ ಖ್ಯಾತ ನಟನ ದರ್ಶನಕ್ಕೆ ಅವನ ಅಭಿಮಾನಿಗಳು ಕೋರ್ಟ್ ಮುಂದೆ ನೆರೆದಿದ್ದರು.

ಮುಂಬೈನಿಂದ ತೆರಳುವ ಮುಂಚೆ ತಾನು ಕಾನೂನನ್ನು ಗೌರವಿಸುವ ವ್ಯಕ್ತಿಯಾಗಿದ್ದು, ಶರಣಾಗಲು ಬಯಸುವುದಾಗಿ ಸಲ್ಮಾನ್ ತಿಳಿಸಿದ್ದನು.
ಮತ್ತಷ್ಟು
ಎಡ ಧೋರಣೆಗೆ ಸಿಪಿಐ-ಎಂಎಲ್ ಟೀಕೆ
ಸಲ್ಮಾನ್ ಸೋಮವಾರ ಶರಣು
ನಾಪತ್ತೆಯಾದ ಸಲ್ಮಾನ್ ಖಾನ್
ಕೋಮುಗಲಭೆ: ತಪ್ಪಿತಸ್ಥರಿಗೆ ಶಿಕ್ಷೆ
ನಾಫೆಡ್‌ ಅಧಿಕಾರಿಗಳಿಂದ 900 ಕೋಟಿ ಗುಳುಂ
ಸುಪ್ರೀಂಕೋರ್ಟ್‌ಗೆ ಮೊರೆ ಹೋದ ಮೋನಿಕಾ