1988ರ ಚಿಂಕಾರಾ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೊಳಗಾಗಿರುವ ಬಾಲಿವುಡ್ ಚಿತ್ರನಟ ಸಲ್ಮಾನ್ ಖಾನ್ ಸಲ್ಲಿಸಿರುವ ಜಾಮೀನು ಕೋರಿಕೆ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ಬುಧವಾರ ವಿಚಾರಣೆಗೆ ಎತ್ತಿಕೊಳ್ಳಲಿದೆ. ಸಂಶಯದ ಲಾಭದ ಆಧಾರದ ಮೇಲೆ ತನ್ನನ್ನು ಬಿಡುಗಡೆ ಮಾಡಬೇಕೆಂದು ಖಾನ್ ಸೋಮವಾರ ರ್ಕೋರ್ಟ್‌ಗೆ ತಿಳಿಸಿದ್ದನು.
ತನ್ನ ವಿರುದ್ಧ ಯಾವುದೇ ಸಾಕ್ಷ್ಯಾಧಾರವಿಲ್ಲ ಮತ್ತು ತನ್ನ ಚಾಲಕ ಹರೀಶ್ ದುಲಾನಿ ಕೋರ್ಟ್‌ಗೆ ನೀಡಿದ ಸಾಕ್ಷ್ಯ ನಂಬಿಕೆಗೆ ಅರ್ಹವಲ್ಲ ಎಂದು ಅವನು ವಾದಿಸಿದ್ದನು. ಹರೀಶ್ ಅಪಹರಣದಲ್ಲಿ ತಾನು ಭಾಗಿಯಾಗಿಲ್ಲ ಎಂದು ಕೂಡ ಸಲ್ಮಾನ್ ತಿಳಿಸಿದ್ದನು.
ಬೇಟೆಯಾಡುವಾಗ ಸಲ್ಮಾನ್ ಜತೆಗಿದ್ದ ಇಬ್ಬರು ಸೇರಿದಂತೆ ಇತರೆ ಆರೋಪಿಗಳನ್ನು ಬಿಡುಗಡೆ ಮಾಡಿರುವ ಆಧಾರದ ಮೇಲೆ ಸಲ್ಮಾನ್ ವಕೀಲರು ಮೇಲ್ಮನವಿ ಸಲ್ಲಿಸಿದ್ದರು. ಸಲ್ಮಾನ್ ಇನ್ನೂ ಎರಡು ದಿನಗಳ ಕಾಲ ಜೈಲುವಾಸ ಅನುಭವಿಸಬೇಕಿದೆ. ನ್ಯೂಸ್ ಚಾನೆಲ್‌ವೊಂದಕ್ಕೆ ಹರೀಶ್ ನೀಡಿದ ಸಂದರ್ಶನದ ಆಧಾರದ ಮೇಲೆ ಸಲ್ಮಾನ್ ವಕೀಲರು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಇದಕ್ಕೆ ಮುಂಚೆ ಸಲ್ಮಾನ್ ವಿರುದ್ಧ ಹೇಳಿಕೆ ನೀಡಿದ್ದ ಹರೀಶ್ ನಾಲ್ಕು ವರ್ಷಗಳ ತನಕ ಕಾಣೆಯಾಗಿದ್ದನು. ಇದಾದ ಬಳಿಕ ಸುದ್ದಿಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ ಅವನು, ಆರೋಪಿ ನಟ ತನಗೆ ಯಾವುದೇ ಹಾನಿ ಮಾಡಿಲ್ಲ ಮತ್ತು ತನ್ನ ಅಪಹರಣ ನಡೆದಿಲ್ಲ ಎಂದೂ ಹರೀಶ್ ರಾಗಬದಲಿಸಿ ಹೇಳಿಕೆ ನೀಡಿದ್ದ.
|