40 ಜನರನ್ನು ಬಲಿತೆಗೆದುಕೊಂಡ ಅವಳಿ ಸ್ಫೋಟಗಳಿಗೆ ಸಂಬಂಧಿಸಿದಂತೆ ಮಂಗಳವಾರ ಮೊಹಮದ್ ಅಬ್ದುಲ್ಲಾ ಎಂಬ ಆರೋಪಿಯನ್ನು ಮಾನೆಪಲ್ಲಿ ಬಡಾವಣೆಯಲ್ಲಿ ಬಂಧಿಸಲಾಗಿದೆ. ಅಬ್ದುಲ್ಲಾ ಅಸ್ಸಾಂನ ನಿವಾಸಿಯೆಂದು ವರದಿಯಾಗಿದೆ.
ಸೋಮವಾರ ತನಿಖೆಯ ಸಲುವಾಗಿ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸ್ಫೋಟಗಳಲ್ಲಿ ಲಷ್ಕರೆ ತೊಯ್ಬಾ ಅಥವಾ ಜೈಷೆ ಮೊಹಮದ್ ಉಗ್ರಗಾಮಿ ಸಂಘಟನೆಗಳ ಕೈವಾಡದ ಬಗ್ಗೆ ಸರ್ಕಾರ ಇಂಗಿತ ನೀಡಿದ್ದು, ಕರಾಚಿ ಮೂಲದ ಉಗ್ರಗಾಮಿಯೊಬ್ಬ ಸ್ಪೋಟದ ಸೂತ್ರಧಾರಿಯಾಗಿರುವ ಬಗ್ಗೆ ಬೆಳಕು ಚೆಲ್ಲಿದೆ.
ಎಲ್‌ಇಟಿ ಮತ್ತು ಜೆಇಎಂ ಸಂಘಟನೆಗಳ ಜತೆ ಬಾಂಗ್ಲಾ ಮೂಲದ ಹರ್ಕತ್ ಉಲ್ ಜೆಹಾದಿ ಇಸ್ಲಾಮಿ(ಹೂಜಿ) ಸಖ್ಯ ಹೊಂದಿದ್ದು, ಕರಾಚಿ ಮೂಲದ ಅಬ್ದುಲ್ ಸಾಹಿಲ್ ಮೊಹಮದ್ ತನ್ನ ಇಬ್ಬರು ಸಂಗಡಿಗರ ಮೂಲಕ ಸ್ಫೋಟಗಳನ್ನು ಯೋಜಿಸಿದ.
ಸಾಹಿಲ್ ಮೊಹಮದ್‌ನ ಸಂಗಡಿಗರು ಹಮ್ಜಾ ಸಂಕೇತನಾಮವಿರುವ ಹೂಜಿ ಉಗ್ರಗಾಮಿಯಿಂದ ಬಾಂಬ್ ತಯಾರಿಕೆಯಲ್ಲಿ ತರಬೇತಿ ಪಡೆದಿದ್ದರು. ಜುಲೈ ಮತ್ತು ಆಗಸ್ಟ್ ಆದಿಯಲ್ಲಿ ಮೊಹಮದ್ ತನ್ನ ಹೈದರಾಬಾದ್ ಸಹಚರನಿಗೆ ಇಂಟರ್ನೆಟ್ ಸಂದೇಶ ಕಳಿಸಿ ತಾನು ಮುಂಚೆ ತಿಳಿಸಿದ ಯೋಜನೆಯನ್ನು ಕಾರ್ಯಗತಗೊಳಿಸುವಂತೆ ಸೂಚಿಸಿದ.
|