ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸಂಕಷ್ಟದಲ್ಲಿರುವ ಮಕ್ಕಳಿಗೆ ಉತ್ತಮ ಭವಿಷ್ಯ: ರಾಷ್ಟ್ರಪತಿ
PTI
ಹೆಣ್ಣು ಮಗು ಮತ್ತು ಸಂಕಷ್ಟದಲ್ಲಿರುವ ಮಕ್ಕಳ ಬಗ್ಗೆ ವಿಶೇಷ ಗಮನ ವಹಿಸುವ ಮೂಲಕ ಅವರಿಗೆ ಉತ್ತಮ ಭವಿಷ್ಯವನ್ನು ಕಲ್ಪಿಸಲು ರಾಷ್ಟ್ರಪತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಕರೆನೀಡಿದ್ದಾರೆ.

ಮಂಗಳವಾರ ರಕ್ಷಾಬಂಧನದ ಪ್ರಯುಕ್ತ ರಾಷ್ಟ್ರಪತಿ ಭವನದಲ್ಲಿ ಅವರು ಮಾತನಾಡುತ್ತಿದ್ದರು. ಸಾಂಸ್ಕೃತಿಕ ಸಮಗ್ರತೆಗೆ ಅವಕಾಶ ನೀಡುವ ಈ ಸಮಾರಂಭದಲ್ಲಿ ರಾಷ್ಟ್ರದ ವಿವಿಧ ಭಾಗಗಳಿಗೆ ಸೇರಿದ ಮಕ್ಕಳು ಪಾಲ್ಗೊಂಡಿದ್ದರು.

ಇಂತಹ ಸಂದರ್ಭಗಳಲ್ಲಿ ಸಮಾಜವು ಕಷ್ಟಕ್ಕೀಡಾದ ಮಕ್ಕಳ ಬಾಳಿನಲ್ಲಿ ಆವರಿಸಿದ ಶೂನ್ಯವನ್ನು ಸಣ್ಣ ರೀತಿಯಲ್ಲಿ ತುಂಬಬಹುದು ಎಂದು ರಾಷ್ಟ್ರಪತಿ ಹೇಳಿದರು. ಸಾಮಾನ್ಯವಾಗಿ ಈ ಮಕ್ಕಳಿಗೆ ಹಣಕಾಸು ನೆರವು ಸಿಗುತ್ತದೆ. ಸಮಾಜದ ಭಾವನಾತ್ಮಕ ಆಸರೆ ಸಿಕ್ಕಿದರೆ ಮಕ್ಕಳ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿ ಎಲ್ಲ ಕಷ್ಟಗಳನ್ನು ಜಯಿಸುತ್ತಾರೆ ಎಂದು ಅವರು ಹೇಳಿದರು.

"ಅವರಿಗೆ ಎಲ್ಲ ರೀತಿಯಲ್ಲಿ ಉತ್ತಮ ಭವಿಷ್ಯವನ್ನು ಕಲ್ಪಿಸುವ ಬದ್ಧತೆಯನ್ನು ನಾವು ಪುನರುಚ್ಚರಿಸೋಣ ಮತ್ತು ಸಹಜ ಬಾಲ್ಯದಿಂದ ವಂಚಿತರಾದ ಈ ಮಕ್ಕಳಿಗೆ ಪ್ರೀತಿ, ವಿಶ್ವಾಸ ಮತ್ತು ಕಾಳಜಿಯ ಬಂಧವನ್ನು ಬೆಸೆಯೋಣ" ಎಂದು ರಾಷ್ಟ್ರಪತಿ ಹೇಳಿದರು.

ವ್ಯಕ್ತಿಯೊಬ್ಬ ಆತ್ಮಗೌರವ ಮತ್ತು ವಿಶ್ವಾಸವನ್ನು ಹೊಂದಲು ಶಿಕ್ಷಣ ಒಂದು ಅಸ್ತ್ರ. ರಕ್ಷಾಬಂಧನದ ಈ ದಿನ ಹೆಣ್ಣು-ಗಂಡುಗಳ ಜನಸಂಖ್ಯೆ ಸಮತೋಲನಕ್ಕೆ ಭಂಗ ತರುವ ಪದ್ಧತಿಯನ್ನು ತಪ್ಪಿಸಲು ಪ್ರಯತ್ನಿಸಬೇಕೆಂದು ಅವರು ಹೇಳಿದರು.

ಈ ವರ್ಷದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ರಾಷ್ಟ್ರದ ವಿವಿಧ ಭಾಗಗಳ ಸುಮಾರು 100 ಮಕ್ಕಳು ರಾಷ್ಟ್ರಪತಿ ಭವನದಲ್ಲಿ ಸೇರಿದ್ದರು. ಜಮ್ಮು ಕಾಶ್ಮೀರ ಮತ್ತು ಈಶಾನ್ಯದ ಉಗ್ರಗಾಮಿಪೀಡಿತ ಪ್ರದೇಶಗಳಿಂದ ಬಂದ ಮಕ್ಕಳು, ಕೋಮುಗಲಭೆಗಳಲ್ಲಿ ತಂದೆತಾಯಿಗಳನ್ನು ಕಳೆದುಕೊಂಡ ಮಕ್ಕಳು, ಸೇನೆ ಮತ್ತು ಪೊಲೀಸ್ ಸೇವೆಯಲ್ಲಿದ್ದ ತಂದೆ, ತಾಯಿಗಳನ್ನು ಕಳೆದುಕೊಂಡ ಮಕ್ಕಳು, ಎಚ್‌ಐವಿ ಪಾಸಿಟಿವ್ ಮಕ್ಕಳು, ವಿಕಲಚೇತನ ಮಕ್ಕಳು ಮತ್ತು ತಲಸೇಮಿಯಾ ಕಾಯಿಲೆಗೆ ತುತ್ತಾದ ಮಕ್ಕಳು ನೆರೆದಿದ್ದವು.
ಮತ್ತಷ್ಟು
ಲಡಕ್‌ನಲ್ಲಿ ಯುರೇನಿಯಂ ನಿಕ್ಷೇಪ ಪತ್ತೆ
ಸ್ಫೋಟ: ಮೊಹಮದ್ ಅಬ್ದುಲ್ಲಾ ಬಂಧನ
ನ್ಯಾಯಾಧೀಶರ ತನಿಖಾ ಮಸೂದೆಗೆ ವಿರೋಧ
ಸೆ.27ರವರೆಗೆ ಸಂಜಯ್ ದತ್‌ಗೆ ಸ್ವಾತಂತ್ರ್ಯ
ಹೈದರಾಬಾದ್ ಸ್ಫೋಟ:ಲಷ್ಕರೆ, ಜೈಷೆ ಕೈವಾಡ ಶಂಕೆ
ಕಾನೂನು ಕ್ರಮದಿಂದ ಪಾರಾಗಲು ಚಾಕು ನುಂಗಿದ!