ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ನಾಗಾಲ್ಯಾಂಡ್:30 ಮನೆಗಳಿಗೆ ಬೆಂಕಿ
ಎನ್‌ಎಸ್‌ಸಿಎನ್ ಕಾರ್ಯಕರ್ತರು 30 ಮನೆಗಳಿಗೆ ಅಗ್ನಿಸ್ಪರ್ಶ ಮಾಡಿದ ಘಟನೆ ನಾಗಾಲ್ಯಾಂಡ್‌ನ ಪೆರೆನ್ ಜಿಲ್ಲೆಯ ಜಾಲುಕಿ ಜಾಂಗ್ಡಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ. ಮನೆಗೆ ಬೆಂಕಿ ಹಚ್ಚುವಾಗ ಮನೆಯ ಮಾಲೀಕರು ತೀವ್ರ ಪ್ರತಿರೋಧ ಒಡ್ಡಿದರು. ಈ ಸಂದರ್ಭದಲ್ಲಿ ಕೆಲವು ಮಹಿಳೆಯರು ಕೂಡ ಗಾಯಗೊಂಡಿದ್ದಾರೆ.

ಜಾಲುಕಿ ಉಪವಿಭಾಗದಡಿಯ ಜಾಲುಕಿ ಜಾಂಗ್ಡಿ ಮತ್ತು ಮುಂಗ್ಲುಮುಖ್ ಗ್ರಾಮಗಳ ನಡುವೆ ಗಡಿವಿವಾದದ ಫಲಶ್ರುತಿಯೇ ಅಗ್ನಿಸ್ಪರ್ಶಕ್ಕೆ ಕಾರಣ ಎಂದು ಅಧಿಕೃತ ವರದಿಗಳು ತಿಳಿಸಿವೆ.

ಮನೆಗಳಿಗೆ ಬೆಂಕಿ ಹಚ್ಚುವುದರ ವಿರುದ್ಧ ಗ್ರಾಮಸ್ಥರು ಪ್ರತಿಭಟಿಸಿದಾಗ, ಮುಂಗ್ಲುಮುಖ್ ಗ್ರಾಮಸ್ಥರ ಪರವಾಗಿ ತಮ್ಮ ಸಂಘಟನೆಯ ಹೈಕಮಾಂಡ್ ಮನೆಗಳಿಗೆ ಬೆಂಕಿ ಹಚ್ಚಲು ಆದೇಶ ನೀಡಿದೆಯೆಂದು ಎನ್ಎಸ್‌ಸಿಎನ್- ಐಎಂ ಕಾರ್ಯಕರ್ತರು ತಿಳಿಸಿದ್ದಾರೆ.

ಆದರೆ ತಾವು ಕಳೆದ ಐದು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದು, ಮುಂಗ್ಲುಮುಖ್ ಗ್ರಾಮಸ್ಥರ ಜತೆ ತಮಗೆ ವಿವಾದವೇನೂ ಇಲ್ಲ ಎಂದು ಜುಲುಕಿ ಜಾಂಗ್ಡಿ ಗ್ರಾಮಸ್ಥರು ಹೇಳುತ್ತಿದ್ದಾರೆ.

ಇದಾದ ಬಳಿಕ ಕ್ಯಾಂಪ್ ಹೆಬ್ರಾನ್‌ನ ಎನ್‌ಎಸ್‌ಸಿಎನ್ ಮುಖ್ಯ ಕಚೇರಿಗೆ ತೆರಳಿದ ಗ್ರಾಮಸ್ಥರು ಮುಖಂಡರ ಭೇಟಿಗೆ ಒತ್ತಾಯಿಸಿದರೂ ಅವರಿಗೆ ಪ್ರವೇಶ ಸಿಗಲಿಲ್ಲ.ಜೆಲಿಯಾಂಗ್ ಮತ್ತು ಆಲ್ ಜೆಲಿಯಾಗ್ರಾಂಗ್ ವಿದ್ಯಾರ್ಥಿ ಸಂಘಟನೆಗಳು ಈ ಘಟನೆಯನ್ನು ಖಂಡಿಸಿವೆ ಎಂದು ಮೂಲಗಳು ತಿಳಿಸಿವೆ.
ಮತ್ತಷ್ಟು
ಅಪಘಾತಕ್ಕೆ 4 ಬಲಿ: ಆಗ್ರಾ ಉದ್ವಿಗ್ನ
ಸಂಕಷ್ಟದಲ್ಲಿರುವ ಮಕ್ಕಳಿಗೆ ಉತ್ತಮ ಭವಿಷ್ಯ: ರಾಷ್ಟ್ರಪತಿ
ಲಡಕ್‌ನಲ್ಲಿ ಯುರೇನಿಯಂ ನಿಕ್ಷೇಪ ಪತ್ತೆ
ಸ್ಫೋಟ: ಮೊಹಮದ್ ಅಬ್ದುಲ್ಲಾ ಬಂಧನ
ನ್ಯಾಯಾಧೀಶರ ತನಿಖಾ ಮಸೂದೆಗೆ ವಿರೋಧ
ಸೆ.27ರವರೆಗೆ ಸಂಜಯ್ ದತ್‌ಗೆ ಸ್ವಾತಂತ್ರ್ಯ