ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸಲ್ಮಾನ್ ಅರ್ಜಿಯ ವಿಚಾರಣೆಗೆ ನಕಾರ
WDPTI
ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ, ರಾಜಸ್ಥಾನ ಹೈಕೋರ್ಟ್‌ನ ನ್ಯಾಯಾಧೀಶರೊಬ್ಬರು ಬಾಲಿವುಡ್ ಚಿತ್ರನಟ ಸಲ್ಮಾನ್ ಖಾನ್ ಜಾಮೀನು ಅರ್ಜಿಯ ವಿಚಾರಣೆಗೆ ಬುಧವಾರ ನಿರಾಕರಿಸಿದ್ದು, ಅದನ್ನು ಇನ್ನೊಂದು ಪೀಠ ವಿಚಾರಣೆಗೆ ಎತ್ತಿಕೊಳ್ಳಲಿದೆ.

ನಟನ ಜಾಮೀನು ಕೋರಿಕೆಯ ವಿಚಾರಣೆ ನಡೆಸಬೇಕಿದ್ದ ನ್ಯಾಯಮೂರ್ತಿ ಜಿ.ಕೆ. ವ್ಯಾಸ್ ಇನ್ನೊಂದು ಪೀಠವನ್ನು ಸಂಪರ್ಕಿಸುವಂತೆ ಸಲ್ಮಾನ್ ವಕೀಲರಿಗೆ ಸೂಚಿಸಿದರು. ಸಲ್ಮಾನ್ ವಕೀಲರು ನ್ಯಾಯಮೂರ್ತಿ ಎಚ್.ಆರ್.ಪವಾರ್ ಪೀಠವನ್ನು ಸಂಪರ್ಕಿಸಿದ ಬಳಿಕ ಮಧ್ಯಾಹ್ನ 2 ಗಂಟೆಗೆ ಪವಾರ್ ವಿಚಾರಣೆಗೆ ಎತ್ತಿಕೊಂಡರು
.
ಚಿಂಕಾರಾ ಬೇಟೆ ಪ್ರಕರಣದಲ್ಲಿ ಐದು ವರ್ಷಗಳ ಶಿಕ್ಷೆಯಾದ ಬಳಿಕ ಸಲ್ಮಾನ್ ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು ಬುಧವಾರ ನಡೆಸಲು ವ್ಯಾಸ್ ಪಟ್ಟಿ ಮಾಡಿದ್ದರು. ಕಳೆದ ಶನಿವಾರ ಸಲ್ಮಾನ್ ಅವರನ್ನು ಜೋಧ್‌ಪುರದಲ್ಲಿ ಬಂಧಿಸಲಾಗಿತ್ತು.
ಮತ್ತಷ್ಟು
ನಾಗಾಲ್ಯಾಂಡ್:30 ಮನೆಗಳಿಗೆ ಬೆಂಕಿ
ಅಪಘಾತಕ್ಕೆ 4 ಬಲಿ: ಆಗ್ರಾ ಉದ್ವಿಗ್ನ
ಸಂಕಷ್ಟದಲ್ಲಿರುವ ಮಕ್ಕಳಿಗೆ ಉತ್ತಮ ಭವಿಷ್ಯ: ರಾಷ್ಟ್ರಪತಿ
ಲಡಕ್‌ನಲ್ಲಿ ಯುರೇನಿಯಂ ನಿಕ್ಷೇಪ ಪತ್ತೆ
ಸ್ಫೋಟ: ಮೊಹಮದ್ ಅಬ್ದುಲ್ಲಾ ಬಂಧನ
ನ್ಯಾಯಾಧೀಶರ ತನಿಖಾ ಮಸೂದೆಗೆ ವಿರೋಧ