ಹೈದರಾಬಾದ್ ಸ್ಫೋಟದಂತ ಪರಿಸ್ಥಿತಿ ನಿಭಾಯಿಸಲು ಫೆಡರಲ್ ತನಿಖಾ ದಳ ಸ್ಥಾಪಿಸುವ ಪ್ರಸ್ತಾಪಕ್ಕೆ ಸರ್ಕಾರ ತೆರೆದ ಮನಸ್ಸು ಹೊಂದಿದೆ. ಆದರೆ ಭಯೋತ್ಪಾದನೆ ನಿಗ್ರಹದ ಪೊಟಾ ಕಾನೂನಿಗೆ ಮರುಜೀವ ಕೊಡಬೇಕೆಂಬ ಪ್ರತಿಪಕ್ಷದ ಒತ್ತಾಯವನ್ನು ತಿರಸ್ಕರಿಸಿದೆ.
ಒಕ್ಕೂಟ ತನಿಖಾ ದಳದ ಪರಿಕಲ್ಪನೆ ತಳ್ಳಿಹಾಕುವಂತಿಲ್ಲ. ಅದರ ಬಗ್ಗೆ ಒಮ್ಮತ ಮೂಡುವ ತನಕ ಸರ್ಕಾರ ಏನೂ ಮಾಡುವುದಿಲ್ಲ ಎಂದು ಗೃಹ ಸಚಿವ ಶಿವರಾಜ್ ಪಾಟೀಲ್ ಲೋಕಸಭೆಗೆ ಬುಧವಾರ ತಿಳಿಸಿದರು.
ಬಿಜೆಪಿ ಮಂಡಿಸಿದ ನಿಲುವಳಿ ಸೂಚನೆ ಕುರಿತ ಕಾವೇರಿದ ಚರ್ಚೆಯನ್ನು ಮುಗಿಸಿದ ಬಳಿಕ,ರಾಜ್ಯ ಸರ್ಕಾರಗಳ ಮೇಲೆ ಕೇಂದ್ರ ಸರ್ಕಾರ ಪೊಟಾ ಕಾನೂನನ್ನು ಹೇರುವುದಿಲ್ಲ ಎಂದು ಅವರು ತಿಳಿಸಿದರು.
ಪೊಟಾ ಕಾನೂನನ್ನು ಪುನಃ ತರಬೇಕೆಂಬ ಪ್ರತಿಪಕ್ಷದ ಆಗ್ರಹವನನ್ನು ತಳ್ಳಿಹಾಕಿದ ಅವರು, ಇದು ಭಯೋತ್ಪಾದಕರ ವೃದ್ಧಿಗೆ ಅವಕಾಶ ನೀಡಿ ಅಮಾಯಕರಿಗೆ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದರು.
|