ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಎಡಪಕ್ಷಗಳ ಸಾಂತ್ವನಕ್ಕೆ ಕಾಂಗ್ರೆಸ್ ನಿರ್ಧಾರ
ಪ್ರಧಾನ ಮಂತ್ರಿ ಮನಮೋಹನ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ ಭೇಟಿ ಮಾಡಿ ಭಾರತ-ಅಮೆರಿಕ ಪರಮಾಣು ಒಪ್ಪಂದದ ಬಗ್ಗೆ ಎಡಪಕ್ಷಗಳ ಕಳವಳವನ್ನು ಶಮನಗೊಳಿಸುವ ಉದ್ದೇಶಿತ ವ್ಯವಸ್ಥೆಯ ವಿಧಿವಿಧಾನಗಳ ಬಗ್ಗೆ ಚರ್ಚಿಸಿದರು.

ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಮತ್ತು ರಕ್ಷಣಾ ಸಚಿವ ಎ.ಕೆ. ಆಂಟೊನಿ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು. ಇದಕ್ಕಾಗಿ ಉನ್ನತ ಮಟ್ಟದ ಸಮಿತಿ ಸ್ಥಾಪನೆಗೆ ಕೂಡ ಅವರು ನಿರ್ಧರಿಸಿದರು.

ಯುಪಿಎ ಮತ್ತು ಎಡಪಕ್ಷಗಳು ಈ ವ್ಯವಸ್ಥೆಗೆ ಮೂರ್ತ ರೂಪ ನೀಡುವ ಬಗ್ಗೆ ನಿರ್ಧರಿಸಲು ಗುರುವಾರ ಭೇಟಿಯಾಗಲಿವೆ. ಉಭಯ ಕಡೆಗಳ ಮುಖಂಡರು ಸಭೆಯಲ್ಲಿರಬೇಕೆಂದು ಎಡಪಕ್ಷಗಳು ಒತ್ತಾಯಿಸುತ್ತಿವೆ.

ಗುರುವಾರದ ಸಂಭವನೀಯ ಸಭೆಯಲ್ಲಿ ಸರ್ಕಾರದ ನಿರ್ಧಾರವನ್ನು ನಮಗೆ ತಿಳಿಸಬಹುದು ಎಂದು ಸಿಪಿಎಂ ನಾಯಕ ಸೀತಾರಾಂ ಯೆಚೂರಿ ವರದಿಗಾರರಿಗೆ ಇಲ್ಲಿ ತಿಳಿಸಿದರು. ಈ ವ್ಯವಸ್ಥೆ ಅಥವಾ ಸಮಿತಿಯು ವರದಿ ನೀಡುವ ತನಕ ಒಪ್ಪಂದದ ಅನುಷ್ಠಾನದ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಬಾರದು ಎಂದು ಯೆಚೂರಿ ಪ್ರತಿಪಾದಿಸಿದರು.

ಸಿಪಿಎಂ, ಸಿಪಿಐ ಮತ್ತು ಫಾರ್ವರ್ಡ್ ಬ್ಲಾಕ್ ಅಗತ್ಯಬಿದ್ದರೆ ತಾವು ಇಂತಹ ವ್ಯವಸ್ಥೆಗೆ ಸೇರಲು ಇಚ್ಛಿಸುವುದಾಗಿ ತಿಳಿಸಿವೆ. ಪಕ್ಷದ ಒಳಗಿನ ಚರ್ಚೆಗಳ ಬಳಿಕ ನಿರ್ಧಾರ ಕೈಗೊಳ್ಳುವುದಾಗಿ ಆರ್‌ಎಸ್‌ಪಿ ಸರ್ಕಾರಕ್ಕೆ ಮಾಹಿತಿ ನೀಡಿದೆ.
ಮತ್ತಷ್ಟು
ಪೊಟಾ ಕಾನೂನಿಗೆ ಸರ್ಕಾರ ನಿರಾಕರಣೆ
ಶಂಕಿತ ಆರೋಪಿಯ ರೇಖಾಚಿತ್ರ ಬಿಡುಗಡೆ
ಅಣು ಶಕ್ತಿ :ಖಾಸಗಿಗೆ ಅವಕಾಶವಿಲ್ಲ
ಸಲ್ಮಾನ್ ಅರ್ಜಿಯ ವಿಚಾರಣೆಗೆ ನಕಾರ
ನಾಗಾಲ್ಯಾಂಡ್:30 ಮನೆಗಳಿಗೆ ಬೆಂಕಿ
ಅಪಘಾತಕ್ಕೆ 4 ಬಲಿ: ಆಗ್ರಾ ಉದ್ವಿಗ್ನ