ಕಳ್ಳನೊಬ್ಬನಿಗೆ ಉದ್ರಿಕ್ತ ಗುಂಪೊಂದು ಥಳಿಸಿದ ಬಳಿಕ ಅವನನ್ನು ಪೊಲೀಸ್ ಮೋಟರ್ ಸೈಕಲ್‍ಗೆ ಕಟ್ಟಿ ಎಳೆದುಕೊಂಡು ಹೋದ ಭಾಗಲ್ಪುರ ಘಟನೆಯನ್ನು ಲೋಕಸಭೆಯಲ್ಲಿ ಗುರುವಾರ ಖಂಡಿಸಲಾಯಿತು.
ಈ ಘಟನೆಯನ್ನು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಬಣ್ಣಿಸಿದ ಸಭಾಧ್ಯಕ್ಷ ಸೋಮನಾಥ ಚಟರ್ಜಿ, ಪಕ್ಷಭೇದ ಮರೆತು ಹೇಯ ಘಟನೆಯನ್ನು ಖಂಡಿಸುವಂತೆ ಸದಸ್ಯರಿಗೆ ಒತ್ತಾಯಿಸಿದರು.
ಬಿಹಾರದಲ್ಲಿ ನಡೆದ ಘಟನೆಯಿಂದ ಲೋಕಸಭೆಯಲ್ಲಿ ಎರಡನೆ ದಿನವೂ ಕೋಲಾಹಲ. 20 ನಿಮಿಷಗಳ ಮುಂದೂಡಿಕೆ ಬಳಿಕ ಸದನ ಮರುಸಮಾವೇಶಗೊಂಡಾಗ ಸ್ಪೀಕರ್ ಪ್ರತಿಕ್ರಿಯೆ ಹೊರಬಿತ್ತು.
ವಿಜಯಕೃಷ್ಣ ಮತ್ತು ರಾಮ್ ಕೃಪಾಲ್ ಸಿಂಗ್ ಸೇರಿ ಆರ್‌ಜೆಡಿ ಸದಸ್ಯರು ಸದನದ ಬಾವಿಗೆ ಮುತ್ತಿಗೆ ಹಾಕುವುದಾಗಿ ಬೆದರಿಸಿದರು. ರಾಜ್ಯದಲ್ಲಿ ಅಲ್ಪಸಂಖ್ಯಾತರು ಅಸುರಕ್ಷಿತರು ಎನ್ನುವುದನ್ನು ಈ ಘಟನೆ ಬಿಂಬಿಸುತ್ತದೆಂದು ಆರ್‌ಜೆಡಿ ಸದಸ್ಯರು ಆರೋಪಿಸಿದರು.
|