ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಪರಮಾಣು ಒಪ್ಪಂದಕ್ಕೆ ಅಲ್ಪವಿರಾಮ
ಕೊನೆಗೂ ಪಟ್ಟು ಸಡಿಲಿಸಿದ ಸರ್ಕಾರ ಪರಮಾಣು ಒಪ್ಪಂದದ ಅನುಷ್ಠಾನಕ್ಕೆ ಗುರುವಾರ ಅಲ್ಪವಿರಾಮ ಹಾಕಿದೆ. ಎಡಪಕ್ಷಗಳು ಎತ್ತಿರುವ ಆಕ್ಷೇಪಗಳ ಪರಿಶೀಲನೆ ಸಲುವಾಗಿ ಸಮಿತಿಯೊಂದರ ರಚನೆ. ಈ ಸಮಿತಿ ವರದಿ ನೀಡುವ ತನಕ ಪರಮಾಣು ಒಪ್ಪಂದದ ಅನುಷ್ಠಾನಕ್ಕೆ ತಡೆ.

ಕಾಂಗ್ರೆಸ್ ಮತ್ತು ಎಡಪಕ್ಷಗಳು ಗುರುವಾರ ಸೇರಿದ್ದ ಸಭೆಯಲ್ಲಿ ಮೇಲಿನ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ " ಒಪ್ಪಂದದ ಅನುಷ್ಠಾನಕ್ಕೆ ಮುನ್ನ ಸಮಿತಿಯ ವರದಿಯನ್ನು ಪರಿಗಣಿಸಲಾಗುವುದು" ಎಂದು ಹೇಳಿಕೆ ಓದಿ ಹೇಳಿದರು.ಒಪ್ಪಂದದ ಬಗ್ಗೆ ಮೂರು ವಾರಗಳಿಂದ ಉದ್ಭವಿಸಿದ ಬಿಕ್ಕಟ್ಟು ಕೊನೆಗೂ ಸಮಾಪ್ತಿಯಾಯಿತು.

ಸಭೆಯಲ್ಲಿ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಯಿತು. ಸಮಿತಿಯ ರಚನೆಯನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು. ಪ್ರಧಾನಿ ನಿವಾಸದಲ್ಲಿ 30 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಮುಖರ್ಜಿ ಯಾವ ಪ್ರಶ್ನೆಗಳಿಗೂ ಉತ್ತರಿಸಲಿಲ್ಲ.

ಸಮಿತಿ ತನ್ನ ವರದಿ ನೀಡುವ ತನಕ ಸರ್ಕಾರ ಒಪ್ಪಂದ ಅನುಷ್ಠಾನ ಮಾಡುವುದಿಲ್ಲ ಎನ್ನುವುದನ್ನು ಹೇಳಿಕೆ ಸ್ಪಷ್ಟಪಡಿಸಿದೆ ಎಂದು ಎಡಪಕ್ಷಗಳ ನಾಯಕರು ತಿಳಿಸಿದರು.
ಮತ್ತಷ್ಟು
ಭಾಗಲ್ಪುರ ಘಟನೆಗೆ ಲೋಕಸಭೆ ಖಂಡನೆ
ಬಿಹಾರದಲ್ಲಿ ಪ್ರಸೂತಿ ಕುಟೀರ
ಮುಷ್ಕರ ಮುಂದುವರಿಸಲು ವೈದ್ಯರ ನಿರ್ಧಾರ
ಎಡಪಕ್ಷಗಳ ಸಾಂತ್ವನಕ್ಕೆ ಕಾಂಗ್ರೆಸ್ ನಿರ್ಧಾರ
ಪೊಟಾ ಕಾನೂನಿಗೆ ಸರ್ಕಾರ ನಿರಾಕರಣೆ
ಶಂಕಿತ ಆರೋಪಿಯ ರೇಖಾಚಿತ್ರ ಬಿಡುಗಡೆ