ರಾಷ್ಟ್ರದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಿಶೇಷ ಪ್ರದರ್ಶನ ರೈಲಿಗೆ ಶಾಹೀದ್ ಭಗತ್ ಸಿಂಗ್ ಅವರ ಜನ್ಮ ವಾರ್ಷಿಕೋತ್ಸವವಕ್ಕೆ ಹೊಂದಿಕೆಯಾಗುವಂತೆ ಸೆ.28ರಂದು ಹಸಿರು ನಿಶಾನೆ ನೀಡುವ ಸಂಭವವಿದೆ. ಮುಂಚಿನ ಯೋಜನೆ ಪ್ರಕಾರ ವಿಶೇಷ ರೈಲನ್ನು ಆಗಸ್ಟ್ 15ರಂದು ಸಫ್ದರ್‌ಜಂಗ್ ರೈಲ್ವೆ ನಿಲ್ದಾಣದಿಂದ ಚಾಲನೆ ನೀಡಬೇಕಿತ್ತು.
ಈ ರೈಲು 9 ತಿಂಗಳ ಕಾಲ ದೇಶದ 90 ನಗರಗಳ ಮೂಲಕ ಪ್ರಯಾಣಿಸಿ ಸಫ್ದರ್‌ಜಂಗ್ ರೈಲ್ವೆ ನಿಲ್ದಾಣಕ್ಕೆ ಪುನಃ ಹಿಂತಿರುಗುವುದು. ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಸಂಸ್ಕೃತಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಅಗತ್ಯ ಸಾಮಗ್ರಿಗಳನ್ನು ಬೋಗಿಗಳಲ್ಲಿ ಅಳವಡಿಸಲು ವಿಫಲವಾಗಿದ್ದೇ ರೈಲು ಉದ್ಘಾಟನೆ ಮುಂದೂಡಲು ಕಾರಣ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
1857ರ ವಿಶೇಷ ರೈಲಿನಲ್ಲಿ 12 ಬೋಗಿಗಳಿದ್ದು, ಪ್ರದರ್ಶನ ಸಾಮಗ್ರಿಗಳು, ಪ್ಯಾಂಟ್ರಿ ಕಾರ್, ಕಾರ್ಯಕರ್ತರು , ಸಿಬ್ಬಂದಿಗೆ ಎಸಿ ಕೋಚ್ ಎರಡು ಗಾರ್ಡ್ ಕ್ಯಾಬಿನ್‌ಗಳನ್ನು ಹೊಂದಿವೆ.
ಪ್ರದರ್ಶನ ಸಾಮಗ್ರಿಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಸಾಧನೆಗಳನ್ನು ಬಿಂಬಿಸುವ ಚಿತ್ರಗಳನ್ನು ಅಳವಡಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
|