ಚಿಂಕಾರಾ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರದಿಂದ ಜೈಲಿನಲ್ಲಿರುವ ಬಾಲಿವುಡ್ ಚಿತ್ರನಟ ಸಲ್ಮಾನ್ ಖಾನ್‌ಗೆ ರಾಜಸ್ಥಾನ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.
ಸಲ್ಮಾನ್ ಜಾಮೀನು ಅರ್ಜಿಯ ಜತೆ ಪುನರ್ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಒಂದು ಲಕ್ಷ ರೂ. ಭದ್ರತೆ ಮತ್ತು 50, 000 ರೂ. ಬಾಂಡ್ ಮೇಲೆ ಬಿಡುಗಡೆಗೆ ಆದೇಶ ನೀಡಿತು.
ಮರುಪರಿಶೀಲನಾ ಅರ್ಜಿಯ ವಿಚಾರಣೆಗೆ ಮುಂದಿನ ದಿನಾಂಕವನ್ನು ಅ.24ಕ್ಕೆ ಕೋರ್ಟ್ ನಿಗದಿ ಮಾಡಿತು.ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್‌ನಲ್ಲಿ ಮೇಲ್ಮನವಿ ಪುರಸ್ಕೃತವಾಗದೇ ಸಲ್ಮಾನ್‌ನನ್ನು ಶನಿವಾರ ಸಂಜೆ ಬಂಧಿಸಿ ಕೇಂದ್ರೀಯ ಕಾರಾಗೃಹದಲ್ಲಿ ಇಡಲಾಗಿತ್ತು.
|