ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಶಹಾಬುದ್ದೀನ್‌ಗೆ 10 ವರ್ಷಗಳ ಕಠಿಣ ಸಜೆ
ಆರ್‌ಜೆಡಿ ಸಂಸತ್ ಸದಸ್ಯ ಮೊಹಮದ್ ಶಹಾಬುದ್ದೀನ್ ಅವರನ್ನು ಶುಕ್ರವಾರ 10 ವರ್ಷಗಳ ಕಠಿಣ ಶಿಕ್ಷೆಗೆ ಗುರಿಪಡಿಸಲಾಗಿದೆ. 11 ವರ್ಷಗಳ ಕೆಳಗೆ ಸಿವಾನ್‌ನ ಸೂಪರಿಂಟೆಂಡೆಂಟ್ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಹಾಬುದ್ದೀನ್‌ಗೆ ಈ ಶಿಕ್ಷೆ ವಿಧಿಸಲಾಗಿದೆ.

ವಿಶೇಷ ನ್ಯಾಯಾಧೀಶ ಜ್ಞಾನೇಶ್ವರ್ ಪ್ರಸಾದ್ ಶ್ರೀವಾತ್ಸವ ಅವರು ಶಹಾಬುದ್ದೀನ್‌ಗೆ ಸೆಕ್ಷನ್ 307(ಹತ್ಯೆಗೆ ಯತ್ನ)ಅಡಿಯಲ್ಲಿ ಶಿಕ್ಷೆ ವಿಧಿಸಿ 2000 ರೂ. ದಂಡ ಹೇರಿದರು. ಸೆಕ್ಷನ್ 353ರ(ಹಲ್ಲೆ ಅಥವಾ ಕರ್ತವ್ಯದಲ್ಲಿದ್ದ ಸರ್ಕಾರಿ ನೌಕರನಿಗೆ ಅಡ್ಡಿ) ಅನ್ವಯ ಶಹಾಬುದ್ದೀನ್‌ಗೆ 2 ವರ್ಷಗಳ ಕಠಿಣ ಶಿಕ್ಷೆ ಮತ್ತು 500 ರೂ.ದಂಡವನ್ನು ಕೂಡ ವಿಧಿಸಲಾಯಿತು.

ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 27ರ ಅನ್ವಯ ಶಹಾಬುದ್ದೀನ್‌ಗೆ 7 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಲಾಗಿದೆ. ಎಲ್ಲ ಶಿಕ್ಷೆಗಳು ಒಟ್ಟೊಟ್ಟಿಗೆ ಜಾರಿಯಾಗಲಿದೆ.ಶಹಾಬುದ್ದೀನ್ ಪೊಲೀಸ್ ಗಾರ್ಡ್‌ಗಳಾಗಿದ್ದ ಜಹಾಂಗೀರ್ ಮತ್ತು ಖಾಲಿಕ್ ಅವರೂ ಕೂಡ ಇಷ್ಟೇ ಪ್ರಮಾಣದ ಶಿಕ್ಷೆಯನ್ನು ಅನುಭವಿಸಲಿದ್ದಾರೆ.

ಶಹಾಬುದ್ದೀನ್ ಝೀರಾಡೆಯ ಶಾಸಕನಾಗಿದ್ದಾಗ ಅವರ ಸಂಗಡಿಗರ ಜತೆ ಎಸ್‌ಪಿ ಎಸ್.ಕೆ. ಸಿಂಘಾಲ್ ಮೇಲೆ ಗುಂಡು ಹಾರಿಸಿದ್ದರು. ಆದರೆ ಎಸ್‌ಪಿ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದರು.
ಮತ್ತಷ್ಟು
ನಟ ಸಲ್ಮಾನ್‌ ಖಾನ್‌ಗೆ ಜಾಮೀನು
ವಿಶೇಷ ರೈಲಿಗೆ ಸೆ.28ರಂದು ಚಾಲನೆ
ಇಂದು ರಾಷ್ಟ್ರಕ್ಕೆ ಎರಡು ಸ್ಥಾವರಗಳ ಅರ್ಪಣೆ
ಪರಮಾಣು ಒಪ್ಪಂದಕ್ಕೆ ಅಲ್ಪವಿರಾಮ
ಭಾಗಲ್ಪುರ ಘಟನೆಗೆ ಲೋಕಸಭೆ ಖಂಡನೆ
ಬಿಹಾರದಲ್ಲಿ ಪ್ರಸೂತಿ ಕುಟೀರ