ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಪರಮಾಣು ಒಪ್ಪಂದ ಅನುಷ್ಠಾನ: ಭಿನ್ನ ಧ್ವನಿ
ಸರ್ಕಾರ ಮತ್ತು ಎಡಪಕ್ಷಗಳ ನಡುವೆ ಒಪ್ಪಂದವಾಗಿದ್ದರೂ ಕೂಡ, ಭಾರತ-ಅಮೆರಿಕ ಪರಮಾಣು ಒಡಂಬಡಿಕೆ ಅನುಷ್ಠಾನಕ್ಕೆ ತರುವ ಬಗ್ಗೆ ಭಿನ್ನ ಧ್ವನಿಗಳು ಶುಕ್ರವಾರ ಕೇಳಿಬಂದಿವೆ.

ಭಾರತ-ಅಮೆರಿಕ ಪರಮಾಣು ಒಪ್ಪಂದದ ಅನುಷ್ಠಾನಕ್ಕೆ ಮಾತುಕತೆ ಸ್ಥಗಿತಗೊಂಡಿಲ್ಲ ಎಂದು ಹಿರಿಯ ಸಚಿವರೊಬ್ಬರುಸ್ಪಷ್ಟಪಡಿಸಿದ್ದಾರೆ. ಎಇಸಿ ಅಧ್ಯಕ್ಷ ಅನಿಲ್ ಕಾಕೋಡ್ಕರ್ ಕೂಡ ವಿಯೆನ್ನಾದಲ್ಲಿ ಮುಂದಿನ ತಿಂಗಳು ಐಎಇಎ ಜತೆ ಮಾತುಕತೆಗಳನ್ನು ತಳ್ಳಿಹಾಕಿಲ್ಲ.

ಆದರೆ ಸಿಪಿಎಂ ಮಾತ್ರ ಪರಮಾಣು ಒಪ್ಪಂದವನ್ನು ಅನುಷ್ಠಾನಗೊಳಿಸಬಾರೆಂದು ಸರ್ಕಾರಕ್ಕೆ ಎಚ್ಚರಿಸಿದೆ. ವಿಯೆನ್ನಾ ಸಭೆಯಲ್ಲಿ ಭಾರತಕ್ಕೆ ಗೊತ್ತಾದ ಸುರಕ್ಷಿತ ಕ್ರಮಗಳ ಬಗ್ಗೆ ಐಎಇಎ ಜತೆ ಸರ್ಕಾರ ಮಾತುಕತೆ ಮುಂದುವರಿಸಬಾರದೆಂದು ಕೂಡ ಪಕ್ಷ ತಿಳಿಸಿದೆ.

ಸರ್ಕಾರ ಮಾತ್ರ ಒಪ್ಪಂದದ ಅನುಷ್ಠಾನಕ್ಕೆ ಐಎಇಎ ಜತೆ ಮಾತುಕತೆ ತಪ್ಪಿಸುವ ಯಾವ ಮಾತೂ ಯುಪಿಎ-ಎಡಪಕ್ಷಗಳ ಹೇಳಿಕೆಯಲ್ಲಿ ಇಲ್ಲವೆಂದು ಹೇಳುತ್ತಿದೆ. ಪರಮಾಣು ಒಪ್ಪಂದದ ಮಾತುಕತೆಗೆ ವಿರಾಮ ಹಾಕಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಪಿ.ಆರ್. ದಾಸ್‌ಮುನ್ಷಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮತ್ತಷ್ಟು
ಶಹಾಬುದ್ದೀನ್‌ಗೆ 10 ವರ್ಷಗಳ ಕಠಿಣ ಸಜೆ
ನಟ ಸಲ್ಮಾನ್‌ ಖಾನ್‌ಗೆ ಜಾಮೀನು
ವಿಶೇಷ ರೈಲಿಗೆ ಸೆ.28ರಂದು ಚಾಲನೆ
ಇಂದು ರಾಷ್ಟ್ರಕ್ಕೆ ಎರಡು ಸ್ಥಾವರಗಳ ಅರ್ಪಣೆ
ಪರಮಾಣು ಒಪ್ಪಂದಕ್ಕೆ ಅಲ್ಪವಿರಾಮ
ಭಾಗಲ್ಪುರ ಘಟನೆಗೆ ಲೋಕಸಭೆ ಖಂಡನೆ