ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಕಲ್ಲುತೂರಾಟ: 12ಕ್ಕೂ ಹೆಚ್ಚು ಪೊಲೀಸರಿಗೆ ಗಾಯ
ಪವಿತ್ರಗ್ರಂಥವೊಂದನ್ನು ಅಪವಿತ್ರಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಶನಿವಾರ ಉದ್ರಿಕ್ತ ಗುಂಪು ಕಲ್ಲು ತೂರಾಟ ನಡೆಸಿದ್ದರಿಂದ ಅಲಹಾಬಾದ್‌ನಲ್ಲಿ ಕರ್ಫ್ಯೂ ವಿಧಿಸಲಾಗಿದೆ. ಕಲ್ಲು ತೂರಾಟದಿಂದ 12ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ.

ಪ್ರಾರ್ಥನಾ ಮಂದಿರದ ಒಳಗೆ ಪವಿತ್ರಗ್ರಂಥವನ್ನು ವಿರೂಪಗೊಳಿಸಿದ ಸುದ್ದಿ ಕೇಳಿದ ಕೂಡಲೇ ಆಕ್ರೋಶಿತ ಗುಂಪು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿತು. ದುಷ್ಕರ್ಮಿಗಳನ್ನು ಶಿಕ್ಷಿಸುವುದಾಗಿ ಪೊಲೀಸರು ನೀಡಿದ ಭರವಸೆ ಗುಂಪಿಗೆ ತೃಪ್ತಿ ನೀಡಲಿಲ್ಲ.

ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿ, ಪೊಲೀಸ್ ಠಾಣೆಗೆ ಕಲ್ಲು ತೂರಿತು. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರೂ ಕಲ್ಲು ತೂರಾಟ ಮುಂದುವರಿಯಿತು.

ಇಬ್ಬರು ಸಬ್ ಇನ್‌ಸ್ಪೆಕ್ಟರ್‌ಗಳು ಗಾಯಗೊಂಡರು ಮತ್ತು ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರಲ್ಲದೇ ಗಾಳಿಯಲ್ಲಿ ಗುಂಡುಹಾರಿಸಿದರು.
ಮತ್ತಷ್ಟು
ಪರಮಾಣು ಒಪ್ಪಂದ ಅನುಷ್ಠಾನ: ಭಿನ್ನ ಧ್ವನಿ
ಶಹಾಬುದ್ದೀನ್‌ಗೆ 10 ವರ್ಷಗಳ ಕಠಿಣ ಸಜೆ
ನಟ ಸಲ್ಮಾನ್‌ ಖಾನ್‌ಗೆ ಜಾಮೀನು
ವಿಶೇಷ ರೈಲಿಗೆ ಸೆ.28ರಂದು ಚಾಲನೆ
ಇಂದು ರಾಷ್ಟ್ರಕ್ಕೆ ಎರಡು ಸ್ಥಾವರಗಳ ಅರ್ಪಣೆ
ಪರಮಾಣು ಒಪ್ಪಂದಕ್ಕೆ ಅಲ್ಪವಿರಾಮ