ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಬಾಂಬ್ ಸ್ಫೋಟಕ್ಕೆ ಒಬ್ಬರ ಬಲಿ
PTI
ಅಸ್ಸಾಂನಲ್ಲಿ ಶಂಕಿತ ಉಗ್ರಗಾಮಿಗಳು ಶನಿವಾರ ಸುಧಾರಿತ ಸ್ಫೋಟಕವೊಂದನ್ನು ಸಿಡಿಸಿದ್ದರಿಂದ ಒಬ್ಬ ವ್ಯಕ್ತಿ ಹತನಾಗಿದ್ದು, 12 ಮಂದಿ ಗಾಯಗೊಂಡಿದ್ದಾರೆ. ರಾಜಧಾನಿಯತ್ತ ತೆರಳುತ್ತಿದ್ದ ಕಿಕ್ಕಿರಿದು ತುಂಬಿದ್ದ ಬಸ್ಸಿನಲ್ಲಿ ಪೊಲೀಸರು ಮೂರು ಸಜೀವ ಬಾಂಬ್‌ಗಳನ್ನು ಪತ್ತೆಹಚ್ಚುವ ಮೂಲಕ ಇನ್ನೊಂದು ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.

ಬಮುನಿಮೈದಾನ ಪ್ರದೇಶದ ಜನದಟ್ಟಣೆಯ ತರಕಾರಿ ಮಾರುಕಟ್ಟೆಯಲ್ಲಿ ಬೆಳಿಗ್ಗೆ 11.45ಕ್ಕೆ ಸ್ಫೋಟಕ ಸಿಡಿಯಿತು. ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಆಟೋ ವ್ಯಾನ್‌ನಲ್ಲಿ ಬಾಂಬ್ ಇಡಲಾಗಿತ್ತು.

ವ್ಯಾನ್‌ನಲ್ಲಿ ಅನಿಲ ಸಿಲಿಂಡರ್ ಇಟ್ಟಿದ್ದರಿಂದ ಸ್ಫೋಟದ ತೀವ್ರತೆ ಹೆಚ್ಚಿತು ಎಂದು ಸರ್ಕಾರಿ ವಕ್ತಾರ ಮತ್ತು ಸಚಿವ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.ಈ ಘಟನೆಯಲ್ಲಿ ದಾರಿಹೋಕನೊಬ್ಬ ಸ್ಥಳದಲ್ಲೇ ಅಸುನೀಗಿದ್ದಾನೆ ಮತ್ತು ಕೆಲವು ಸ್ಥಳೀಯ ಮಾರಾಟಗಾರರು ಗಾಯಗೊಂಡಿದ್ದಾರೆ.
ಮತ್ತಷ್ಟು
ಕಲ್ಲುತೂರಾಟ: 12ಕ್ಕೂ ಹೆಚ್ಚು ಪೊಲೀಸರಿಗೆ ಗಾಯ
ಪರಮಾಣು ಒಪ್ಪಂದ ಅನುಷ್ಠಾನ: ಭಿನ್ನ ಧ್ವನಿ
ಶಹಾಬುದ್ದೀನ್‌ಗೆ 10 ವರ್ಷಗಳ ಕಠಿಣ ಸಜೆ
ನಟ ಸಲ್ಮಾನ್‌ ಖಾನ್‌ಗೆ ಜಾಮೀನು
ವಿಶೇಷ ರೈಲಿಗೆ ಸೆ.28ರಂದು ಚಾಲನೆ
ಇಂದು ರಾಷ್ಟ್ರಕ್ಕೆ ಎರಡು ಸ್ಥಾವರಗಳ ಅರ್ಪಣೆ