ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಕೃಷಿ ಅಭಿವೃದ್ಧಿಗೆ ಬದ್ಧ:ಸೋನಿಯಾ
ರೈತರು, ಬಡವರು ಮತ್ತು ನಿರ್ಗತಿಕರ ಅಭಿವೃದ್ಧಿಗಾಗಿ ಆಂಧ್ರಪ್ರದೇಶ ಕ್ಷಿಪ್ರಗತಿಯಲ್ಲಿ ದಾಪುಗಾಲು ಹಾಕುತ್ತಿದೆ ಎಂದು ಯುಪಿಎ ಅಧ್ಯಕ್ಷೆ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಇಲ್ಲಿ ತಿಳಿಸಿದರು.

ಎಲ್ಲ ಕ್ಷೇತ್ರಗಳಲ್ಲಿ ತ್ವರಿತಗತಿಯ ಪ್ರಗತಿ ಸಾಧಿಸುವ ಮೂಲಕ ಇಡೀ ರಾಷ್ಟ್ರಕ್ಕೆ ಆದರ್ಶ ರಾಜ್ಯವಾಗಿ ಹೊರಹೊಮ್ಮಿದೆ ಎಂದು ಸೋನಿಯಾ ಹೇಳಿದರು.ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಬಳಿಕ ಕಿಕ್ಕಿರಿದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಇದು ಹಳ್ಳಿಗಳ ದೇಶವಾದ್ದರಿಂದ ಕೃಷಿ ಅಭಿವೃದ್ಧಿಗೆ ದುಡಿಯುವುದು ನಮ್ಮ ಪಕ್ಷದ ಗುರಿಯಾಗಿದೆ ಎಂದು ಹೇಳಿದರು. ಕಾಂಗ್ರೆಸ್‌ನ ಆದರ್ಶಗಳನ್ನು ಈಡೇರಿಸಿದ ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಅವರನ್ನು ಸೋನಿಯಾ ಅಭಿನಂದಿಸಿದರು.ದಮನಿತ ವರ್ಗಗಳಿಗಲ್ಲದೇ ಜಾತಿ, ಜನಾಂಗ, ಧರ್ಮ ಭೇದವಿಲ್ಲದೇ ಎಲ್ಲ ಜನರಿಗೆ ಕಾಂಗ್ರೆಸ್ ಅವಕಾಶಗಳನ್ನು ಒದಗಿಸಿದೆ ಎಂದು ಅವರು ಶ್ಲಾಘಿಸಿದರು.

ಬಡವರ ಉದ್ಧಾರಕ್ಕೆ ಯುಪಿಎ ಸರ್ಕಾರ ಕೈಗೊಂಡ ಎನ್‌ಆರ್ಇಜಿಪಿ ಮತ್ತು ಭಾರತ್ ನಿರ್ಮಾಣ್ ಕಾರ್ಯಕ್ರಮಗಳನ್ನು ಅವರು ಪ್ರಸ್ತಾಪಿಸಿದರು. ರಾಜ್ಯಸರ್ಕಾರ ಪ್ರಾಯೋಜಿತ ಬಡಜನರಿಗೆ ವಸತಿ ಒದಗಿಸುವ ಇಂದಿರಮ್ಮ ಕಾರ್ಯಕ್ರಮ, ರೈತ ಪರ ಕಾರ್ಯಕ್ರಮಗಳನ್ನು ಅವರು ಹೊಗಳಿದರು.
ಮತ್ತಷ್ಟು
ಬಾಂಬ್ ಸ್ಫೋಟಕ್ಕೆ ಒಬ್ಬರ ಬಲಿ
ಕಲ್ಲುತೂರಾಟ: 12ಕ್ಕೂ ಹೆಚ್ಚು ಪೊಲೀಸರಿಗೆ ಗಾಯ
ಪರಮಾಣು ಒಪ್ಪಂದ ಅನುಷ್ಠಾನ: ಭಿನ್ನ ಧ್ವನಿ
ಶಹಾಬುದ್ದೀನ್‌ಗೆ 10 ವರ್ಷಗಳ ಕಠಿಣ ಸಜೆ
ನಟ ಸಲ್ಮಾನ್‌ ಖಾನ್‌ಗೆ ಜಾಮೀನು
ವಿಶೇಷ ರೈಲಿಗೆ ಸೆ.28ರಂದು ಚಾಲನೆ