ಇನ್ಸಾಟ್ 4ಸಿಆರ್ ಎಂಬ ಸಂಪರ್ಕ ಸಾಟಲೈಟನ್ನು ಆದಿತ್ಯವಾರದಂದು ಬಿಡುಗಡೆಗೊಳಿಸಲು ಭಾರತವು ಸಜ್ಜಾಗಿದೆ. ಕಳೆದ ವರ್ಷ ಈ ಮಾದರಿಯ ಸಾಟಲೈಟ್ ಅಂತರಿಕ್ಷಕ್ಕೆ ಸಾಗುತ್ತಿರುವ ವೇಳೆ ನಾಶಗೊಂಡಿದ್ದು, ಪ್ರಸ್ತುತ 4ಸಿಆರ್ ಇದರ ಸ್ಥಾನ ಅಲಂಕರಿಸಲಿದೆ.
ಸ್ಥಳೀಯ ಸಮಯ ಸಂಜೆ 4.20ಕ್ಕೆ ಈ ಸಾಟಲೈಟನ್ನು , 49 ಮೀಟರ್(1,481-ಅಡಿ)ಯ ಉನ್ನತ ಸಾಟಲೈಟ್ ವಾಹನ ಅಥವಾ ಜಿಎಸ್‌ಎಲ್‌ವಿಯು ಅಂತರಿಕ್ಷಕ್ಕೆ ಸಾಗಿಸಲಿದೆ ಎಂದು ಶ್ರೀಹರಿಕೋಟಾ ಅಂತರಿಕ್ಷ ಕೇಂದ್ರದ ಅಂತರಿಕ್ಷ ಸಂಸ್ಥೆಯ ನಿರ್ದೆಶಕರು ತಿಳಿಸಿದ್ದಾರೆ. .
ಈ ಸಾಟಲೈಟ್ ಬಿಡುಗಡೆಯಿಂದ ಭಾರತದ ಸಂಪರ್ಕ ಕ್ಷೇತ್ರದಲ್ಲಿ ಮಹತ್ತರವಾದ ಅಭಿವೃದ್ದಿಗಳು ಕಂಡುಬರಲಿದೆ. ಈ ಉನ್ನತ-ಶಕ್ತಿಯುತ ಸಾಟಲೈಟ್ ದೇಶದಲ್ಲಿನ ಸಂಪರ್ಕ ಕ್ಷೇತ್ರದ ಸಾಮರ್ಥ್ಯವನ್ನು ವೃದ್ದಿಸುವುದಲ್ಲದೆ, ಬೇಡಿಕೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಇನ್ಸಾಟ್-4ಸಿಆರ್ ಬಿಡುಗಡೆಯಿಂದ ಟೆಲಿಕಮ್ಮುನಿಕೇಶನ್ ಕ್ಷೇತ್ರದಲ್ಲಿನ ಪಡಿಯಚ್ಚು( ಫಾಸಿಮೈಲ್) ಮತ್ತು ಇಂಟರ್‌ನೆಟ್ ಸಂಚಾರದಿಂದ ಸಾಟಲೈಟ್ ಟೆಲಿವಿಷನ್, ವೀಡಿಯೋ ಪ್ರಸಾರ, ಡಿಜಿಟೈಲ್ ಸಾಟಲೈಟ್, ಸುದ್ದಿಸಂಗ್ರಹದವರೆಗೆ ಅಭಿವೃದ್ದಿ ಕಾಣಲಿದೆ.
2,130ಕಿಲೋಗ್ರಾಂ(4,686ಪೌಂಡ್ಸ್) ತೂಕವಿರುವ ಇನ್ಸಾಟ್-4ಸಿಆರ್ 12 ವೆಬ್‌ಬ್ಯಾಂಟ್ ಚಾನೆಲ್‌ಗಳನ್ನು ಹೊಂದಿದ್ದು, ಅನೇಕ ವೀಡಿಯೋ ಮತ್ತು ಆಡಿಯೋ ನೆಟ್‌ವರ್ಕ್‌ಗಳ ಮುಖಾಂತರ ಒಂದೇ ಬಾರಿಗೆ ಡಿಜಿಟಲ್ ರವಾನೆಗೆ ಅನುಮತಿ ಮಾಡಿಕೊಡಲಿದೆ.
ಇದರ ಬಿಡುಗಡೆಯೊಂದಿಗೆ ಬಳಕೆದಾರರು ಲ್ಯಾಂಡ್‌ಲೈನ್ ಅಥವಾ ಭೂ ಕ್ಷೇತ್ರಕ್ಕೆ ಈಗ ಕೊಡುವ ಮೌಲ್ಯಕ್ಕಿಂಕ ಕಡಿಮೆ ಹಣ ಕೊಡಲು ಸಾಧ್ಯವಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಆದಿತ್ಯವಾರದಂದು ಅಂತರಿಕ್ಷಕ್ಕೆ ಹಾರುವ ಇನ್ಸಾಟ್-4ಸಿಆರ್, ಜಿಎಸ್‌ಎಲ್‌ವಿಯ ಐದನೇ ಬಿಡುಗಡೆಯಾಗಿದೆ. ಕಳೆದ ವರ್ಷ ಜುಲೈತಿಂಗಳಲ್ಲಿ ಬಿಡುಗಡೆಗೊಂಡ ಸಾಟಲೈಟ್ ಕಕ್ಷೆಗೆ ಸಾಗುತ್ತಿರುವ ವೇಳೆ ತನ್ನ ಪಥದಿಂದ ದಾರಿ ತಪ್ಪಿ ನಾಶಹೊಂದಿತ್ತು.
|