ದೈಹಿಕವಾಗಿ ಸವಾಲು ಎದುರಿಸುತ್ತಿರುವವರಿಗೆ ನೀಡಲಾಗುತ್ತಿರುವ ವಿಶೇಷ ಸೌಲಭ್ಯಗಳನ್ನು ಜಾತಿ ಆಧಾರಿತ ಮಿಸಲಾತಿಯಡಿಯಲ್ಲಿ ನೀಡಲು ಬರುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಇಂದು ತೀರ್ಪಿತ್ತಿದೆ. ದೈಹಿಕವಾಗಿ ಅಸಮರ್ಥರಾಗಿರುವವರು ಅಸಮರ್ಥರು ಎಂದು ಹೇಳಿರುವ ನ್ಯಾಯಾಲಯವು, ದೈಹಿಕ ವಿಕಲಾಂಗತೆ ಸಾಮಾನ್ಯವಾಗಿ ಜಾತಿ, ದರ್ಮ, ಪಂಗಡಗಳಿಗೆ ಅನ್ವಯಿಸುವುದಿಲ್ಲ ಎಂದು ಎಸ್ ಬಿ ಸಿನ್ಹಾ ಮತ್ತು ಎಚ್ ಎಸ್ ಬೇಡಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.
ಪ. ಜಾತಿ ಮತ್ತು ಪಂಗಡಗಳಿಗೆ ಮಿಸಲಾತಿ ಸೌಲಭ್ಯವನ್ನು ಕಲ್ಪಿಸುವ ಸಂವಿಧಾನದ ಕಲಂ 16 (4)ರ ವ್ಯಾಖ್ಯಾನವನ್ನು ಇಂದ್ರಾ ಸಾಹ್ನಿ ಪ್ರಕರಣದಲ್ಲಿ ಉಲ್ಲೆಖಿಸಿದ ವಿಭಾಗೀಯ ಪೀಠವು ಮಿಸಲಾತಿ ಪ್ರತಿಶತ 50 ದಾಟಕೂಡದು ಎಂದು ಹೇಳಿ ಮಹಿಳಾ ಮತ್ತು ಅಂಗವಿಕಲರಿಗೆ ನೀಡಲಾಗುತ್ತಿರುವ ಮಿಸಲಾತಿ ಮೇಲಿನ ತೀರ್ಪಿನ ಅಡಿಯಲ್ಲಿ ಬರುವುದಿಲ್ಲ ಎಂದು ಹೇಳಿದೆ.
ಹಿಂದುಳಿದ ವರ್ಗಗಳಿಗೆ ಸರಕಾರ ನೀಡಿರುವ ಮಿಸಲಾತಿ ಸೌಲಭ್ಯ ಪ್ರತಿಶತ 50ನ್ನು ತಲುಪಿದ್ದರೂ ಮಹಿಳೆಯರಿಗೆ ಮತ್ತು ಅಂಗವಿಕಲರಿಗೆ ಸರಕಾರ ಮಿಸಲಾತಿ ನೀಡುವ ಉದ್ದೇಶ ಹೊಂದಿದ್ದರೆ, ಆ ಮಸೂದೆಗೆ ನ್ಯಾಯಾಲಯ ಅಡ್ಡಿಪಡಿಸುವುದಿಲ್ಲ ಎಂದು ಈ ಸಂದರ್ಭದಲ್ಲಿ ಭರವಸೆ ನೀಡಿದೆ.
|