ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇನ್ಸಾಟ್-4ಸಿಆರ್ ಉಪಗ್ರಹವನ್ನು ಹೊತ್ತ ಜಿಎಸ್‌ಎಲ್‌ವಿ ಎಫ್04 ರಾಕೆಟ್ ಭಾನುವಾರ ಸಂಜೆ 6.21 ಗಂಟೆಗೆ ಭೂಸ್ಥಿರ ಕಕ್ಷೆಗೆ ಹಾರಿತು.
ಮೇಲೆ ಹಾರಿದ 17 ನಿಮಿಷಗಳಲ್ಲಿ ಭೂಸ್ಥಿರ ಉಪಗ್ರಹ ಉಡಾವಣೆ ವಾಹನ-ಎಫ್04 2.130 ಕೇಜಿ ತೂಕದ ಉಪಗ್ರಹವನ್ನು 248 ಕಿಮೀ ಎತ್ತರದಲ್ಲಿರುವ ಭೂಸ್ಥಿರ ಕಕ್ಷೆಯಲ್ಲಿ ಯಶಸ್ವಿಯಾಗಿ ಇರಿಸಿತು. ಮನೆಗಳಿಗೆ ಉಪಗ್ರಹದಿಂದ ನೇರ ಟೆಲಿವಿಷನ್ ಸೇವೆಗೆ ಇದರಿಂದ ಚೇತರಿಕೆ ಸಿಕ್ಕಿದೆ.
ಇದಕ್ಕೆ ಮುಂಚೆ ರಾಕೆಟ್‌ನ ವೆಂಟ್ ವಾಲ್ವ್‌ನಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಅದನ್ನು ಸರಿಪಡಿಸಲು ವಿಜ್ಞಾನಿಗಳು 40 ನಿಮಿಷಗಳನ್ನು ತೆಗೆದುಕೊಂಡರು ಮತ್ತು ಸಂಜೆ 6 ಗಂಟೆಗೆ ರಾಕೆಟ್ ಹಾರಾಟಕ್ಕೆ ಮುಕ್ತವಾಯಿತು.
49 ಮೀಟರ್ ಉದ್ದದ ಉಡಾವಣೆ ವಾಹನ ತನ್ನ ಪ್ರೊಪಲ್ಶನ್ ವ್ಯವಸ್ಥೆಯನ್ನು ಬಳಸಿಕೊಂಡು ಭೂಸ್ಥಿರ ಕಕ್ಷೆಯಲ್ಲಿ ಉಪಗ್ರಹವನ್ನು ನೆಲೆಗೊಳಿಸಿತು.ಹಿಂದಿನ ಮಾದರಿಯಾದ ಇನ್ಸಾಟ್-4ಸಿ ಬದಲಿಗೆ ಇನ್ಸಾಟ್-4ಸಿಆರ್ ಹಾರಿಬಿಡಲಾಗಿದೆ.
ಕಳೆದ ವರ್ಷ ಜು.10ರಂದು ಹಾರಿಬಿಡಲಾದ ಇನ್ಸಾಟ್ -4ಸಿ ಉಪಗ್ರಹವು ಉಡಾವಣೆ ವಾಹಕ ಮೇಲೆ ಹಾರಿದ 56 ಸೆಕೆಂಡ್‌ಗಳಲ್ಲಿ ಮೋಟರ್‌ನ ಸ್ಟ್ರಾಪ್ ದೋಷದಿಂದ ಕೆಳಗೆ ಬಿದ್ದಿದ್ದರಿಂದ ನಾಶಗೊಂಡಿತ್ತು.
|