ಹಿಮಶಿಖರ ಶೃಂಗದಲ್ಲಿ ಪರೀಕ್ಷೆಗಳನ್ನು ನಡೆಸಿದ ಬಳಿಕ ದೇಶೀಯವಾಗಿ ನಿರ್ಮಿತ ಧ್ರುವ ಹೆಲಿಕಾಪ್ಟರನ್ನು ಸಿಯಾಚಿನ್ ವಲಯದಲ್ಲಿ ಸೇನೆಗೆ ಸೇರ್ಪಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.
ಫೆಬ್ರವರಿಯಲ್ಲಿ ಪರೀಕ್ಷೆಗಳನ್ನು ನಡೆಸಲಾಯಿತು ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಧ್ರುವದ ಔಪಚಾರಿಕ ಸೇರ್ಪಡೆ ಬಳಿಕ, ಸುಧಾರಿತ,ಹಗುರ ಹೆಲಿಕಾಪ್ಟರ್ ಎಂ1-17, ಚೇತಕ್, ಚೀಟಾ ಮತ್ತು ಚೇತನ್ ಹೆಲಿಕಾಪ್ಟರ್‌ಗಳ ಜತೆಗೂಡಲಿದ್ದು, ಸಿಯಾಚಿನ್ ವಾಯುಪ್ರದೇಶದಲ್ಲಿ ತಿಂಗಳಿಗೆ 35 ಗಂಟೆಗಳ ಕಾಲ ಹಾರಾಟ ನಡೆಸಲಿದೆ.
ಧ್ರುವ ಅತ್ಯಂತ ಎತ್ತರದ ಹಿಮಶೃಂಗದಲ್ಲಿ ಫೆ.15ರಂದು ಯಶಸ್ವಿಯಾಗಿ ಹಾರಾಟ ನಡೆಸುವ ಅರ್ಹತೆ ಗಳಿಸಿತು. ಬೆಂಗಳೂರಿನ ಎಚ್‌ಎಎಲ್ ನಿರ್ಮಿಸಿ 1998ರಲ್ಲಿ ಭಾರತೀಯ ವಾಯುಪಡೆಗೆ ಧ್ರುವ ಸೇರ್ಪಡೆಯಾಗಿದೆ.
ಅತ್ಯಂತ ಎತ್ತರದ ಪ್ರದೇಶಗಳಲ್ಲಿ ಶೋಧ ಮತ್ತು ರಕ್ಷಣೆ, ತುರ್ತು ಏರ್‌ಲಿಫ್ಟ್, ಏರ್ ಆಂಬುಲೆನ್ಸ್, ಸಾಮಗ್ರಿ ರವಾನೆಗೆ ಸಂಬಂಧಿಸಿದ ಎಲ್ಲ ಕಾರ್ಯಾಚರಣೆಗಳಲ್ಲಿ ಧ್ರುವ ಅತ್ಯುತ್ತಮ ಎನಿಸಿದೆ.
|