ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಕಟ್ಟೆಚ್ಚರಕ್ಕೆ ಎಲ್ಲ ರಾಜ್ಯಗಳಿಗೆ ಸೂಚನೆ
ಹೈದರಾಬಾದ್ ಸ್ಫೋಟಗಳ ಹಿನ್ನೆಲೆಯಲ್ಲಿ ಪ್ರಮುಖ ನಗರಗಳ ಜನದಟ್ಟಣೆಯ ಪ್ರದೇಶಗಳಲ್ಲಿ ಸಂಭವನೀಯ ಭಯೋತ್ಪಾದಕ ದಾಳಿಗಳ ಬಗ್ಗೆ ಕೇಂದ್ರ ಸರ್ಕಾರವು ತಮಿಳುನಾಡು ಸೇರಿದಂತೆ ಎಲ್ಲ ರಾಜ್ಯಗಳಿಗೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದೆ.

ಆಂಧ್ರಪ್ರದೇಶ ಅವಳಿ ಬಾಂಬ್ ದಾಳಿಗಳಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವ ನಡುವೆ, ರಾಜ್ಯದಲ್ಲಿ ಕಟ್ಟೆಚ್ಚರ ವಹಿಸುವಂತೆ ತಮಿಳುನಾಡು ಡಿಜಿಪಿಗೆ ಸೂಚಿಸಲಾಗಿದೆ. ಪೊಲೀಸ್ ಆಯುಕ್ತ ನಂಜಿಲ್ ಕುಮಾರನ್ ವರದಿಗಾರರ ಜತೆ ಮಾತನಾಡುತ್ತಾ, ಮಾರುಕಟ್ಟೆ ಸ್ಥಳಗಳು ಮತ್ತು ಜನದಟ್ಟಣೆಯ ಸ್ಥಳಗಳಲ್ಲಿ ಹೆಚ್ಚುವರಿ ಭದ್ರತಾ ರಕ್ಷಣೆ ಕಲ್ಪಿಸಲಾಗಿದೆ ಎಂದು ವರದಿಗಾರರಿಗೆ ತಿಳಿಸಿದರು.

ಕೇಂದ್ರದ ಗುಪ್ತಚರ ಬ್ಯೂರೊ ಚೆನ್ನೈಗೆ ಮಾತ್ರವಲ್ಲದೇ ಎಲ್ಲ ರಾಜ್ಯಗಳಿಗೂ ವಿದೇಶದಲ್ಲಿ ನೆಲೆಸಿರುವ ಕೆಲವು ಭಯೋತ್ಪಾದಕ ಶಕ್ತಿಗಳ ಸಂಚಿನ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ.

ಬಾಂಗ್ಲಾದೇಶದ ಹೂಜಿ ಕಾರ್ಯಕರ್ತ ಚೆನ್ನೈನಲ್ಲಿ ಅಡಗಿರುವ ಬಗ್ಗೆ ನಗರಪೊಲೀಸರಿಗೆ ನಿರ್ದಿಷ್ಟ ಮಾಹಿತಿ ಬಂದಿಲ್ಲ ಎಂದು ಕುಮಾರನ್ ತಿಳಿಸಿದರು.
ಮತ್ತಷ್ಟು
ಸಿಯಾಚಿನ ವಲಯಕ್ಕೆ ಧ್ರುವ ಹೆಲಿಕಾಪ್ಟರ್
ಇನ್ಸಾಟ್-4ಸಿಆರ್ ಯಶಸ್ವಿ ಉಡಾವಣೆ
ವಿಕಲಾಂಗರಿಗೆ ಜಾತಿ ಆಧಾರಿತ ಮಿಸಲಾತಿ ಇಲ್ಲ: ತೀರ್ಪು
ಇನ್ಸಾಟ್4 ಸಿಆರ್ ಉಡಾವಣೆಗೆ ಇಸ್ರೋ ಸಿದ್ದತೆ
ಕೃಷಿ ಅಭಿವೃದ್ಧಿಗೆ ಬದ್ಧ:ಸೋನಿಯಾ
ಬಾಂಬ್ ಸ್ಫೋಟಕ್ಕೆ ಒಬ್ಬರ ಬಲಿ