ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಬಾಂಗ್ಲಾದಲ್ಲಿ ಸ್ಫೋಟದ ಸೂತ್ರಧಾರ ಬಂಧನ
ಹೈದರಾಬಾದ್‌ನಲ್ಲಿ ಮೆಕ್ಕಾ ಮಸೀದಿ ಸ್ಫೋಟದ ಸೂತ್ರಧಾರಿಯೆಂದು ಶಂಕಿಸಲಾದ ವ್ಯಕ್ತಿಯನ್ನು ಬಾಂಗ್ಲಾದೇಶ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಬಾಂಗ್ಲಾ ಪೊಲೀಸರು ಅಲ್ಲಿನ ಹೂಜಿ ಕಾರ್ತಕರ್ತ ಮೊಹಮದ್ ಶರೀಫುದ್ದೀನ್ ಎಂಬವನನ್ನು ಬಂಧಿಸಿರುವ ಬಗ್ಗೆ ತಮಗೆ ಮಾಹಿತಿ ಸಿಕ್ಕಿರುವುದಾಗಿ ಭದ್ರತಾ ಸಂಸ್ಥೆಗಳು ತಿಳಿಸಿವೆ.

24 ಜನರನ್ನು ಬಲಿತೆಗೆದುಕೊಂಡ ಹೈದರಾಬಾದ್ ಸ್ಫೋಟಗಳಲ್ಲಿ, ಬಾಂಬ್‌ಗಳನ್ನು ಅಡಗಿಸಿಟ್ಟ ಇಬ್ಬರು ಶಂಕಿತರಲ್ಲಿ ಅವನೂ ಸೇರಿದ್ದಾನೆಂದು ಭದ್ರತಾ ಸಂಸ್ಥೆಗಳು ಮತ್ತು ಪೊಲೀಸರು ಗುರುತಿಸಿದ್ದಾರೆ.

ಅಂತರ-ಗಡಿ ಕ್ರಿಮಿನಲ್ ಎಂದು ನಂಬಲಾದ ಶರೀಫುದ್ದೀನ್, ಹಮ್ಜಾ ಮತ್ತು ಕಾಂಚನ್ ಸಂಕೇತನಾಮಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ. ಆರ್ಥಿಕ ಲಾಭದ ಉದ್ದೇಶಕ್ಕಾಗಿ ಹೂಜಿ ಮತ್ತು ಪಾಕಿಸ್ತಾನ ಮೂಲದ ಉಗ್ರರಿಗೆ ನೆರವು ನೀಡುತ್ತಿದ್ದ ಎಂದು ಮೂಲಗಳು ಹೇಳಿವೆ.

ಅವಳಿ ಸ್ಫೋಟಗಳ ಮುಖ್ಯ ಆರೋಪಿ ಮತ್ತು ಹೂಜಿ ಅಧಿಪತಿ ಬಿಲಾಲ್ ಆದೇಶದ ಮೇಲೆ ಶರೀಫುದ್ದೀನ್ ಈ ದುಷ್ಕೃತ್ಯಕ್ಕೆ ಇಳಿದ. ವರದಿಗಳ ಸತ್ಯಾಸತ್ಯತೆ ಪರಿಶೀಲನೆಗೆ ಸಿಬಿಐ ಇಂಟರ್‌ಪೋಲ್‌ಗೆ ಮನವಿ ಸಲ್ಲಿಸಿದೆ.
ಮತ್ತಷ್ಟು
ಕಟ್ಟೆಚ್ಚರಕ್ಕೆ ಎಲ್ಲ ರಾಜ್ಯಗಳಿಗೆ ಸೂಚನೆ
ಸಿಯಾಚಿನ ವಲಯಕ್ಕೆ ಧ್ರುವ ಹೆಲಿಕಾಪ್ಟರ್
ಇನ್ಸಾಟ್-4ಸಿಆರ್ ಯಶಸ್ವಿ ಉಡಾವಣೆ
ವಿಕಲಾಂಗರಿಗೆ ಜಾತಿ ಆಧಾರಿತ ಮಿಸಲಾತಿ ಇಲ್ಲ: ತೀರ್ಪು
ಇನ್ಸಾಟ್4 ಸಿಆರ್ ಉಡಾವಣೆಗೆ ಇಸ್ರೋ ಸಿದ್ದತೆ
ಕೃಷಿ ಅಭಿವೃದ್ಧಿಗೆ ಬದ್ಧ:ಸೋನಿಯಾ