ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯ ಮತ್ತು ಸಿಂಗಪುರವನ್ನು ಒಳಗೊಂಡ ಅತೀ ದೊಡ್ಡ ನೌಕಾ ಚಟುವಟಿಕೆ "ಮಲಬಾರ್" ಬಂಗಾಳ ಕೊಲ್ಲಿಯಲ್ಲಿ ಮಂಗಳವಾರ ಆರಂಭವಾಗಿದೆ. ವಿಮಾನ ವಾಹಕ ನೌಕೆಗಳು, ಕ್ಷಿಪಣಿ ನಾಶಕ ನೌಕೆಗಳು ಸೇರಿದಂತೆ 26 ಯುದ್ಧವಿಮಾನಗಳ ಸಮೂಹವು ಈ ಅಭ್ಯಾಸದಲ್ಲಿ ಕಂಡುಬರಲಿದೆ.
ವಿಶಾಖಪಟ್ಟಣಂ ಮತ್ತು ಅಂಡಮಾನ್, ನಿಕೋಬಾರ್ ದ್ವೀಪಗಳ ಜಲಪ್ರದೇಶ ನಡುವೆ ಸಮರಕ್ರೀಡೆಯಲ್ಲಿ ಅಮೆರಿಕದ ಎರಡು ಮತ್ತು ಭಾರತದ ಒಂದು ವಿಮಾನ ವಾಹಕ ನೌಕೆಗಳು. ನೂರಾರು ಮಿಲಿಟರಿ ವಿಮಾನಗಳು, ಕ್ಷಿಪಣಿ ನಾಶಕಗಳು ಮತ್ತು ಜಲಾಂತರ್ಗಾಮಿಗಳು ಪಾಲ್ಗೊಳ್ಳಲಿವೆ.
ಐಎನ್‌ಎಸ್ ವಿಕ್ರಾಂತ್ ಜತೆ ಭಾರತವು ಜಾಗೌರ್ ಮತ್ತು ಸೀ ಹ್ಯಾರಿಯರ್ ಯುದ್ಧವಿಮಾನಗಳು, ಟಿಯು-142 ಗಸ್ತು ವಿಮಾನಗಳು, ದೆಹಲಿ ಮತ್ತು ಕಾಶಿನ್ ಕ್ಲಾಸ್ ನಾಶಕಗಳು, ಗೋದಾವರಿ ಮತ್ತು ಬ್ರಹ್ಮಪುತ್ರ ಕ್ಷಿಪಣಿ ನಿರ್ದೇಶಿತ ನೌಕೆ ಮತ್ತು ಜರ್ಮನ್ ಮೂಲದ ಜಲಾಂತರ್ಗಾಮಿ ಈ ಅಭ್ಯಾಸದಲ್ಲಿ ಪಾಲ್ಗೊಳ್ಳಲಿದೆ. ಸಮರಾಭ್ಯಾಸವು ಅಣಕು ಯುದ್ಧದಿಂದ ಮುಕ್ತಾಯವಾಗಲಿದೆ.
|