ದೆಹಲಿ ಹೈಕೋರ್ಟ್ ಆದೇಶದನ್ವಯ ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಎಐಐಎಂಎಸ್ ಪದವೀಧರರ ಡಿಗ್ರಿ ಪ್ರಮಾಣಪತ್ರಗಳಿಗೆ ಸಹಿ ಹಾಕಿದ್ದಾರೆ. ಸಚಿವರು ಎಲ್ಲ ಪ್ರಮಾಣಪತ್ರಗಳಿಗೆ ಸಹಿ ಹಾಕಿದ್ದು, ಅವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಎಂದು ಸಚಿವಾಲಯದ ಮೂಲಗಳು ಹೇಳಿವೆ.
ಎಐಐಎಂಎಸ್ ನಿರ್ದೇಶಕ ಪಿ. ವೇಣುಗೋಪಾಲ್ ಜತೆ ಸಂಘರ್ಷಕ್ಕಿಳಿದಿರುವ ರಾಮದಾಸ್ ಅವರಿಗೆ 24ಗಂಟೆಯೊಳಗೆ ಪ್ರಮಾಣಪತ್ರಗಳಿಗೆ ಸಹಿ ಹಾಕುವಂತೆ ದೆಹಲಿ ಹೈಕೋರ್ಟ್ ಆದೇಶಿಸಿತ್ತು.
ಪ್ರಮಾಣಪತ್ರದಲ್ಲಿ ಅಕ್ರಮವಾಗಿ ನೇಮಕವಾದ ರಿಜಿಸ್ಟ್ರಾರ್ ಸಹಿ ಇರುವುದರಿಂದ ಅವುಗಳಿಗೆ ಸಹ ಹಾಕಲು ರಾಮದಾಸ್ ಈ ಮುಂಚೆ ನಿರಾಕರಿಸಿದ್ದರು. ರಿಜಿಸ್ಟ್ರಾರ್ ಸಹಿಯನ್ನು ಕ್ರಮಬದ್ಧವೆಂದು ತಿಳಿಯುವಂತೆ ಕೋರ್ಟ್ ಆದೇಶಿಸಿತು.
|