ಭಗವಾನ್ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ರಾಷ್ಟ್ರಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ವಿಕ್ಟೋರಿಯ ಸ್ಮಾರಕ ಅಂಧ ಶಾಲೆಯ ವಿದ್ಯಾರ್ಥಿಗಳು ಉತ್ಸವದಲ್ಲಿ ಅಂತರ್ಗತವಾಗಿರುವ 'ದಾಹಿ ಹಂಡಿ' ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಎನ್‌ಜಿಒ ಈ ಸಮಾರಂಭವನ್ನು ಏರ್ಪಡಿಸಿತ್ತು.
ದಾಹಿ ಹಂಡಿ ಆಚರಣೆಯಲ್ಲಿ ಬಾಲಕರು ಒಬ್ಬರ ಮೇಲೊಬ್ಬರು ಹತ್ತಿ ಮಾನವ ಪಿರಮಿಡ್ ನಿರ್ಮಿಸಿದರು. ತುತ್ತತುದಿಗೇರಿದ ಬಾಲಕ ಮೊಸರಿನಿಂದ ತುಂಬಿದ ಕುಡಿಕೆಯನ್ನು ಒಡೆದನು.ಕಾಶ್ಮೀರ ಕಣಿವೆಯ ಶ್ರೀನಗರದಲ್ಲಿ ಕಾಶ್ಮೀರಿ ಪಂಡಿತರು 18 ವರ್ಷಗಳ ಅಂತರದ ಬಳಿಕ ಜನ್ಮಾಷ್ಟಮಿ ಮೆರವಣಿಗೆಯಲ್ಲಿ ತೆರಳಿದರು.
ಗಣಪತ್ಯಾರ್ ಮಂದಿರದಿಂದ ಆರಂಭವಾದ ಮೆರವಣಿಗೆ ದುರ್ಗಾ ನಾಗ್ ಮಂದಿರಕ್ಕೆ ಲಾಲ್ ಚೌಕ್ ಮೂಲಕ ಹಾದುಹೋಯಿತು.
ನವದೆಹಲಿ ವರದಿ: ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಜನ್ಮಾಷ್ಟಮಿ ಅಂಗವಾಗಿ ರಾಷ್ಟ್ರದ ಜನತೆಗೆ ಶುಭ ಹಾರೈಸಿದರು. ಈ ಹಬ್ಬವು ಕೃಷ್ಣನ ಹುಟ್ಟು, ಸರಳತೆ, ಶೌರ್ಯವನ್ನು ನೆನಪಿಸುತ್ತದೆ. ಭಗವಾನ್ ಕೃಷ್ಣನ ಜೀವನ ಮತ್ತು ಬೋಧನೆಯಿಂದ ನಾವು ಸ್ಫೂರ್ತಿ ಪಡೆಯಬೇಕು ಎಂದು ಸಂದೇಶದಲ್ಲಿ ಹೇಳಿದ್ದಾರೆ.
|