ಪರಮಾಣು ಒಪ್ಪಂದದ ಬಗ್ಗೆ ಎಡಪಕ್ಷಗಳ ಕಳವಳ ಶಮನಕ್ಕೆ 15 ಸದಸ್ಯರ ಯುಪಿಎ-ಎಡಪಕ್ಷ ಸಮಿತಿ ರಚನೆಯನ್ನು ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಮಂಗಳವಾರ ರಾತ್ರಿ ಪ್ರಕಟಿಸಿದರು.
ಪ್ರಣವ್ ಮುಖರ್ಜಿ ಸಮಿತಿಯ ಸಂಚಾಲಕರಾಗಿದ್ದು, ಕಾಂಗ್ರೆಸ್ ಮತ್ತು ಎಡಪಕ್ಷಗಳ ತಲಾ 6 ಮಂದಿ ಸದಸ್ಯರು ಮತ್ತು ಯುಪಿಎ ಅಂಗಪಕ್ಷಗಳಾದ ಆರ್‌ಜೆಡಿ, ಡಿಎಂಕೆ ಮತ್ತು ಎನ್‌ಸಿಪಿಯ ತಲಾ ಒಬ್ಬರು ಸದಸ್ಯರು ಸಮಿತಿಯಲ್ಲಿರುತ್ತಾರೆ.
ಮುಖರ್ಜಿಯವರ ಹಿರಿಯ ಕ್ಯಾಬಿನೆಟ್ ಸಹೋದ್ಯೋಗಿಗಳಾದ ಎ.ಕೆ. ಆಂಟೊನಿ, ಪಿ. ಚಿದಂಬರಂ, ಕಪಿಲ್ ಸಿಬಾಲ್, ಸೈಫುದ್ದೀನ್ ಸೋಜ್, ಪ್ರಥ್ವಿರಾಜ್ ಚವಾಣ್, ಲಾಲು ಪ್ರಸಾದ್, ಟಿ.ಆರ್.ಬಾಲು ಮತ್ತು ಶರದ್ ಪವಾರ್ ಸರ್ಕಾರವನ್ನು ಪ್ರತಿನಿಧಿಸುವ ಇತರ ಸದಸ್ಯರು.
ಪ್ರಕಾಶ್ ಕಾರಟ್, ಸಿಪಿಎಂನ ಸೀತಾರಾಂ ಯೆಚೂರಿ, ಎ.ಬಿ.ಬರ್ಧನ್ ಮತ್ತು ಸಿಪಿಐನ ಡಿ.ರಾಜಾ, ಫಾರ್ವರ್ಡ್ ಬ್ಲಾಕ್‌ನ ದೇವವ್ರತ ಬಿಸ್ವಾಸ್ ಮತ್ತು ಆರ್‌ಎಸ್‌ಪಿಯ ಚಂದ್ರಚೂಡನ್ ಎಡಪಕ್ಷಗಳನ್ನು ಪ್ರತಿನಿಧಿಸುತ್ತಾರೆ.
ಸಮಿತಿಯ ಪ್ರಥಮ ಸಭೆಯ ದಿನಾಂಕವನ್ನು ಇನ್ನೂ ನಿರ್ಧರಿಸಬೇಕಿದೆ ಎಂದು ಮುಖರ್ಜಿ ತಿಳಿಸಿದ್ದು,, ಅದು ವರದಿ ನೀಡುವ ಕಾಲಮಿತಿ ಕುರಿತ ಪ್ರಶ್ನೆಗೆ ಉತ್ತರಿಸಲಿಲ್ಲ. ಪರಮಾಣು ಒಪ್ಪಂದವನ್ನು ತಿರಸ್ಕರಿಸಿರುವ ಎಡಪಕ್ಷಗಳು ಒಪ್ಪಂದವನ್ನು ಅನುಷ್ಠಾನಗೊಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆಂದು ಎಚ್ಚರಿಸಿರುವ ಹಿನ್ನೆಲೆಯಲ್ಲಿ ಸರ್ಕಾರ ಕಳೆದ ವಾರ ಸಮಿತಿಯನ್ನು ಪ್ರಕಟಿಸಿತ್ತು.
|