ದಿವಂಗತ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಬುಧವಾರ ಲೋಕಸಭೆ ಗೌರವ ಅರ್ಪಿಸಿತು. ಶಿಕ್ಷಕರ ದಿನವಾದ ಈ ಸಂದರ್ಭವನ್ನು ಬಳಸಿಕೊಂಡು ನಿಷ್ಠ ವಿದ್ಯಾರ್ಥಿಗಳಾಗಿರುವಂತೆ ಸಭಾಧ್ಯಕ್ಷ ಸೋಮನಾಥ ಚಟರ್ಜಿ ಸದಸ್ಯರಿಗೆ ಹಿತವಚನ ನುಡಿದರು.
"ಕನಿಷ್ಠ ಶಿಕ್ಷಕರ ದಿನವಾದ ಇಂದಾದರೂ ಮುಖ್ಯೋಪಾಧ್ಯಾಯರ ಮಾತನ್ನು ಕೇಳಿ" ಎಂದು ಚಟರ್ಜಿ ನಗೆಯ ಬುಗ್ಗೆಯ ನಡುವೆ ಹೇಳಿದರು.ಶಿಕ್ಷಕ ವೃಂದಕ್ಕೆ ಈ ಸಂದರ್ಭದಲ್ಲಿ ಗೌರವ ಅರ್ಪಿಸಿದ ಅವರು, ಸಾಂಪ್ರದಾಯಿಕವಾಗಿ ಶಿಕ್ಷಕರು ತಮ್ಮ ನಿಸ್ವಾರ್ಥ ಮತ್ತು ನಿಷ್ಠೆಯ ಸೇವೆಯಿಂದ ಸಮಾಜದಲ್ಲಿ ಉನ್ನತ ಗೌರವವನ್ನು ಗಳಿಸಿದ್ದಾರೆ.
ಈ ದಿನ ನಾವು ಡಾ. ರಾಧಾಕೃಷ್ಣನ್ ಅವರಿಗೆ ಮತ್ತು ಇಡೀ ಶಿಕ್ಷಕ ಸಮುದಾಯಕ್ಕೆ ಗೌರವ ಅರ್ಪಿಸೋಣ. ಶಿಕ್ಷಕರ ವಿಪುಲ ಕೊಡುಗೆ ಇಲ್ಲದಿದ್ದರೆ ಯಾವುದೇ ರಾಷ್ಟ್ರ ಪ್ರಗತಿ ಮತ್ತು ಸಮೃದ್ಧಿಯ ಗುರಿ ಸಾಧಿಸಲು ಸಾಧ್ಯವಿಲ್ಲ ಎಂದು ಚಟರ್ಜಿ ಹೇಳಿದರು.
|