ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮದರ್ ತೆರೇಸಾ ಪುಣ್ಯತಿಥಿ: ಗೌರವಾರ್ಪಣೆ
ದೀನರ ಬಂಧು ಮದರ್ ತೆರೇಸಾ ಅವರ 10ನೇ ಪುಣ್ಯ ತಿಥಿಯಂದು ಬುಧವಾರ ನೂರಾರು ಜನರು ಮದರ್ ತೆರೇಸಾ ಅವರ ಸಮಾಧಿಗೆ ತೆರಳಿ ಗೌರವ ಸಲ್ಲಿಸಿದರು.

ಮದರ್ ತೆರೇಸ್ ಮೃತರಾದ ಆರು ವರ್ಷಗಳ ಬಳಿಕ 2003ರಲ್ಲಿ ಅವರಿಗೆ ವ್ಯಾಟಿಕನ್ ವಿಶೇಷ ಧಾರ್ಮಿಕ ಗೌರವ ನೀಡಿತ್ತು. ಮದರ್ ತೆರೇಸಾ ನಮಗೆ ಈಗಾಗಲೇ ಸಂತರಾಗಿದ್ದಾರೆ.ಆದರೆ ವ್ಯಾಟಿಕನ್ ಅವರಿಗೆ ಸಂತ ಪದವಿ ನೀಡಿ ಗುರುತಿಸಬೇಕು ಎಂದು ಸುನೀತಾ ಎಕ್ಕಾ ಹೇಳುತ್ತಾರೆ.

ಕೋಲ್ಕತ್ತಾದಲ್ಲಿ ಅನುಯಾಯಿಗಳು ತೆರೇಸಾಗೆ ಸಂತ ಪದವಿ ಸಿಗುವುದೆಂಬ ವಿಶ್ವಾಸ ತಾಳಿದ್ದಾರೆ. ಮದರ್ ತೆರೇಸಾಗೆ ಸಂತ ಪದವಿ ಸಿಗಲು ಎರಡನೇ ಪವಾಡಕ್ಕಾಗಿ ನಾವು ಎದುರುನೋಡುತ್ತಿದ್ದೇವೆ ಎಂದು ತೆರೇಸಾ ಉತ್ತರಾಧಿಕಾರಿ ಸಿಸ್ಟರ್ ನಿರ್ಮಲಾ ಹೇಳಿದರು.

ಬಡವರ, ದೀನದಲಿತರ ಸೇವೆ ಮಾಡಿದ ತೆರೇಸಾ ಸ್ಮರಣಾರ್ಥ ಮೊಂಬತ್ತಿ ಮೆರವಣಿಗೆಯಲ್ಲಿ ಸಂಜೆ ಕೋಲ್ಕತ್ತಾದ ಅನೇಕ ಮಂದಿ ನಿವಾಸಿಗಳು ಪಾಲ್ಗೊಂಡರು. ಕ್ರಿಸ್ತ ಸನ್ಯಾಸಿನಿಯರು ವಿಶೇಷ ಪ್ರಾರ್ಥನೆಗಳನ್ನು ಏರ್ಪಡಿಸಿದರು.
ಮತ್ತಷ್ಟು
ಶಿಕ್ಷಕರ ದಿನಾಚರಣೆ:ಸಂಸತ್ ನಮನ
ಅಮೆರಿಕ ನೀತಿಯ ವಿರುದ್ಧ ಜಾಥಾ
ಉಪಾಹಾರ್ ಅಗ್ನಿ ದುರಂತ: ತೀರ್ಪು ಮುಂದೂಡಿಕೆ
ಪರಮಾಣು ಒಪ್ಪಂದ: 15 ಸದಸ್ಯರ ಸಮಿತಿ
ಸಡಗರದಿಂದ ಜನ್ಮಾಷ್ಟಮಿ ಆಚರಣೆ
ಸಾವಿತ್ರಿ ಪುನಃ ಸರ್ಕಸ್‌ನಲ್ಲಿ ಬಂಧಿ