ಭಾರತ-ಅಮೆರಿಕ ಪರಮಾಣು ಒಪ್ಪಂದ ಕುರಿತು ರಚಿಸಲಾದ ಯುಪಿಎ-ಎಡಪಕ್ಷಗಳ ಸಮಿತಿಯು ಸೆ.9ರ ಬಳಿಕ ತನ್ನ ಪ್ರಥಮ ಸಭೆಯನ್ನು ನಡೆಸಲಿದೆ. ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಜತೆ ಮಾತುಕತೆ ನಡೆಸಿದ ಬಳಿಕ ಸಿಪಿಎಂನ ಹಿರಿಯ ನಾಯಕ ಸೀತಾರಾಂ ಯೆಚೂರಿ ಈ ವಿಷಯವನ್ನು ತಿಳಿಸಿದರು.
15 ಸದಸ್ಯರ ಸಮಿತಿಯನ್ನು ಬುಧವಾರ ಪ್ರಕಟಿಸಲಾಗಿತ್ತು. ಪರಮಾಣು ಒಪ್ಪಂದದಿಂದ ಮೂಡಿದ ಬಿಕ್ಕಟ್ಟಿನ ಪರಿಹಾರಕ್ಕೆ ಸರ್ಕಾರ ಮತ್ತು ಎಡಪಕ್ಷಗಳು ಸಮಿತಿ ರಚನೆಗೆ ಒಂದು ವಾರದ ಕೆಳಗೇ ಒಪ್ಪಿಗೆ ನೀಡಿದ್ದವು.
ಕಾಂಗ್ರೆಸ್‌ನ 6 ಸದಸ್ಯರು ಮತ್ತು ಯುಪಿಎ ಮಿತ್ರಪಕ್ಷಗಳ ಮೂವರು ಸದಸ್ಯರು ಮತ್ತು ಎಡಪಕ್ಷಗಳ 6 ಮಂದಿ ಸದಸ್ಯರು ಸಮಿತಿಯಲ್ಲಿರುತ್ತಾರೆ. ಪರಮಾಣು ಒಪ್ಪಂದದ ಚರ್ಚೆ ರಾಜ್ಯಸಭೆಯಲ್ಲಿ ಶುಕ್ರವಾರ ಮತ್ತು ಲೋಕಸಭೆಯಲ್ಲಿ ಸೆ.10ರಂದು ನಡೆಯುವ ಬಗ್ಗೆ ಮುಖರ್ಜಿ ಪ್ರಸ್ತಾಪಿಸಿದರು.
|