ತಮ್ಮ ಮಗಳನ್ನು ವರದಕ್ಷಿಣೆ ಸಲುವಾಗಿ ಅಳಿಯ ಮತ್ತು ಕುಟುಂಬ ಹತ್ಯೆ ಮಾಡಿದೆ ಎಂದು ಬಿಹಾರ ನ್ಯಾಯಾಧೀಶರ ಪತ್ನಿ ಬುಧವಾರ ಮೊಕದ್ದಮೆ ಹೂಡಿದ್ದಾರೆ. ಬಾಂಕಾದಲ್ಲಿದ್ದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸುಭಾಷ್ ಚಂದ್ರ ಪ್ರಸಾದ್ ಪುತ್ರಿ ರಾಣಿ ಅರ್ಚನಾ ಆ.14 ಮತ್ತು 15ರ ರಾತ್ರಿ ಪಶ್ಚಿಮ ಬಂಗಾಳದ ನ್ಯೂವ್ ಜಲ್ಪೈಗುಡಿಯಿಂದ ಪಾಟ್ನಾಗೆ ರೈಲಿನಲ್ಲಿ ತೆರಳುತ್ತಿದ್ದಾಗ ನಾಪತ್ತೆಯಾಗಿದ್ದಳು.
ತಮ್ಮ ಅಳಿಯ ರಾಜೀವ್ ಸಿಂಗ್, ಅವರ ಇಬ್ಬರು ಸೋದರರು ಮತ್ತು ನಾಲ್ವರು ಸೋದರಿಯರು ಅರ್ಚನಾಳನ್ನು ಅಪಹರಿಸಿದ್ದಾರೆಂದು ಮಾಲತಿದೇವಿ ಸಿಜೆಎಂ ಕೋರ್ಟ್‌ನಲ್ಲಿ ದೂರು ನೀಡಿದ್ದರು. ಅರ್ಚನಾ ಪತಿಯ ಕುಟುಂಬ ಆಕೆ ಏಪ್ರಿಲ್‌ನಲ್ಲಿ ಮದುವೆಯಾದಾಗಿನಿಂದ ಹೆಚ್ಚಿನ ವರದಕ್ಷಿಣೆ ತರುವಂತೆ ಹಿಂಸಿಸುತ್ತಿದ್ದರು ಎಂದು ಮಾಲತಿದೇವಿ ದೂರಿನಲ್ಲಿ ಆಪಾದಿಸಿದ್ದಾರೆ.
ಆದರೆ ಅವರ ಒತ್ತಾಯಕ್ಕೆ ಮಣಿಯದಿದ್ದಾಗ ಅರ್ಚನಾ ಹತ್ಯೆಗೆ ಪಿತೂರಿ ಹೂಡಿದರು ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ. ಈ ಕುರಿತು ಎಫ್‌ಐಆರ್ ಸಲ್ಲಿಸಿ ಪ್ರಕರಣದ ತನಿಖೆ ನಡೆಸುವಂತೆ ಸಿಜೆಎಂ ಗಾಂಧಿ ಮೈದಾನ್ ಪೊಲೀಸ್ ಠಾಣೆಗೆ ಆದೇಶ ನೀಡಿದ್ದಾರೆ.
|