ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ವಕೀಲರು ಕಡ್ಡಾಯ:ಸುಪ್ರೀಂಕೋರ್ಟ್ ತೀರ್ಪು
WDWD
ಪ್ರತಿಯೊಬ್ಬ ಆರೋಪಿ ಪರ ವಾದಕ್ಕೆ ಸರ್ಕಾರ ವಕೀಲರನ್ನು ಒದಗಿಸಬೇಕೆಂದು ಸುಪ್ರೀಂಕೋರ್ಟ್ ಗುರುವಾರ ತೀರ್ಪು ನೀಡಿದೆ. ಹಣಕಾಸಿನ ತೊಂದರೆಯಿಂದ ವಕೀಲರನ್ನು ಇಟ್ಟುಕೊಳ್ಳಲು ಆರೋಪಿ ವಿಫಲವಾದಾಗ ಸರ್ಕಾರಿ ವೆಚ್ಚದಲ್ಲಿ ಆರೋಪಿ ಪರ ವಾದಿಸಲು ವಕೀಲರನ್ನು ಒದಗಿಸಬೇಕೆಂದು ಅರಿಜಿತ್ ಪಸಾಯತ್ ಮತ್ತು ಡಿ.ಕೆ. ಜೈನ್ ಅವರಿದ್ದ ಪೀಠ ತಿಳಿಸಿದೆ.

ಈ ಕುರಿತು ಕಡ್ಡಾಯ ಮಾಡುವ ಸೆಕ್ಷನ್ 304 ಸಿಆರ್‌ಪಿಸಿ ಪಾಲಿಸುವುದನ್ನು ಖಾತರಿಮಾಡಿಕೊಳ್ಳುವಂತೆ ಪೀಠ ಕೋರ್ಟ್‌ಗಳಿಗೆ ತಿಳಿಸಿದೆ.ಸೆಕ್ಷನ್ 304ರಡಿ ಪ್ರತಿಯೊಬ್ಬ ಆರೋಪಿ ವಕೀಲರನ್ನು ನೇಮಿಸಿಕೊಳ್ಳುವ ಅವಕಾಶ ಒದಗಿಸುವುದನ್ನು ಕೋರ್ಟ್‌ಗಳು ಖಾತರಿ ಮಾಡಬೇಕು ಮತ್ತು ಅದರ ವೆಚ್ಚವನ್ನು ಸರ್ಕಾರ ಭರಿಸಬೇಕು.

ಶಹದಾರಾ ಜಿಲ್ಲೆಯ ತಹರಾಪುರ್ ಗ್ರಾಮದಲ್ಲಿ ಡಕಾಯಿತಿ ನಡೆಸಿದ ಆರೋಪ ಹೊತ್ತ ದಿಲ್ವಾರ್ ಸಿಂಗ್ ಎಂಬವನನ್ನು ದೋಷಮುಕ್ತಿಗೊಳಿಸುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಈ ಆದೇಶ ಜಾರಿ ಮಾಡಿದೆ.ವಿಚಾರಣೆ ಕೋರ್ಟ್‌ನಲ್ಲಿ ಸಿಂಗ್ ಪರ ವಕಾಲತ್ತನ್ನು ಯಾವ ವಕೀಲರು ವಹಿಸದಿದ್ದರೂ ಕೋರ್ಟ್ ಅವನಿಗೆ 7 ವರ್ಷಗಳ ಸೆರೆವಾಸ ವಿಧಿಸಿತ್ತು.

ವಕೀಲರ ಪ್ರಾತಿನಿಧ್ಯ ಇಲ್ಲದಿರುವುದರ ಜತೆಗೆ ಸಿಂಗ್ ಡಕಾಯಿತಿ ನಡೆಸಿದ್ದಾನೆಂಬ ಬಗ್ಗೆ ಸೂಕ್ತ ಸಾಕ್ಷ್ಯಾಧಾರ ಇಲ್ಲದ ಹಿನ್ನೆಲೆಯಲ್ಲಿ ಕೋರ್ಟ್ ಅವನನ್ನು ದೋಷಮುಕ್ತಿಗೊಳಿಸಿತು. 1984ರ ಆ.8ರಂದು ಈ ಡಕಾಯಿತಿ ನಡೆದಿದ್ದರೂ ಆ.31ರಂದು ತಡವಾಗಿ ದೂರು ದಾಖಲಿಸಲಾಯಿತು ಎಂದೂ ಕೋರ್ಟ್ ಅಭಿಪ್ರಾಯಪಟ್ಟಿತು.
ಮತ್ತಷ್ಟು
ಅಣು ಒಪ್ಪಂದ: ಲೋಕಸಭೆಯಲ್ಲಿ ಸೋಮವಾರ ಚರ್ಚೆ
ದಾವೂದ್ ಸಹಚರ ಅಟ್ಟರ್‌ವಾಲಾ ಗಡೀಪಾರು
ಪೆರೀರಾಗೆ 3 ವರ್ಷ ಕಠಿಣ ಶಿಕ್ಷೆ
ವರದಕ್ಷಿಣೆ ಹತ್ಯೆ:ಅಳಿಯನ ವಿರುದ್ಧ ದೂರು
ಸೆಪ್ಟೆಂಬರ್ 9ರ ಬಳಿಕ ಸಮಿತಿ ಸಭೆ
ಮದರ್ ತೆರೇಸಾ ಪುಣ್ಯತಿಥಿ: ಗೌರವಾರ್ಪಣೆ