ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸ್ಫೋಟ:ಮೂವರ ಸಾವು, ರೆಡ್ಡಿ ಪಾರು
ಮಾವೋವಾದಿ ನಕ್ಸಲೀಯರು ನೆಲ್ಲೂರು ಜಿಲ್ಲೆಯಲ್ಲಿ ಶುಕ್ರವಾರ ಸ್ಫೋಟಿಸಿದ ನೆಲಬಾಂಬ್ ದಾಳಿಯಲ್ಲಿ ಮೂವರು ಕಾಂಗ್ರೆಸ್ ಕಾರ್ಯಕರ್ತರು ಅಸುನೀಗಿದ್ದು, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಜನಾರ್ಧನ ರೆಡ್ಡಿ , ಪತ್ನಿ ಹಾಗೂ ಸಚಿವೆ ಎನ್. ರಾಜಲಕ್ಷ್ಮಿ ಗಾಯಗಳಿಲ್ಲದೇ ಪಾರಾಗಿದ್ದಾರೆ.

ನಕ್ಸಲೀಯರು ಕಾಲುವೆಯೊಂದರ ಬಳಿ ಬೆಳಿಗ್ಗೆ 6.30ಕ್ಕೆ ಜನಾರ್ಧನ ರೆಡ್ಡಿ ಅವರ ಬೆಂಗಾವಲು ವಾಹನಗಳಿಗೆ ಗುರಿಯಿಟ್ಟು ನೆಲಬಾಂಬ್ ಸ್ಫೋಟಿಸಿದರು. ಚಿಟ್ವೇಡು ಜಿಲ್ಲೆಯಲ್ಲಿ ನಡೆದ ಈ ದಾಳಿಯಲ್ಲಿ ರೆಡ್ಡಿ ದಂಪತಿ ಪ್ರಯಾಣಿಸುತ್ತಿದ್ದ ಗುಂಡು ನಿರೋಧಕ ಕಾರು ಹಾನಿಗೀಡಾಗಿದೆ.

ದೂರನಿಯಂತ್ರಕ ಸಾಧನದಿಂದ ಉಂಟಾದ ಸ್ಫೋಟದಲ್ಲಿ ಮೂವರು ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಲ್ಲೇ ಅಸುನೀಗಿದರೆಂದು ಪೊಲೀಸರು ತಿಳಿಸಿದ್ದಾರೆ. ವಿಶಾಖಪಟ್ಟಣಂ ಕ್ಷೇತ್ರವನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯ ರೆಡ್ಡಿ ಅವರು, ವೆಂಕಟೇಶ್ವರ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ತಿರುಪತಿ ಕಡೆಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಸುಮಾರು 21 ವಾಹನಗಳಿದ್ದ ಬೆಂಗಾವಲು ಪಡೆಯನ್ನು ಸ್ಫೋಟಿಸಲು ನಕ್ಸಲೀಯರು ಯೋಜಿಸಿದ್ದರೆನ್ನುವುದು ಸ್ಪಷ್ಟವಾಗಿದೆ.
ಮತ್ತಷ್ಟು
ವಕೀಲರು ಕಡ್ಡಾಯ:ಸುಪ್ರೀಂಕೋರ್ಟ್ ತೀರ್ಪು
ಅಣು ಒಪ್ಪಂದ: ಲೋಕಸಭೆಯಲ್ಲಿ ಸೋಮವಾರ ಚರ್ಚೆ
ದಾವೂದ್ ಸಹಚರ ಅಟ್ಟರ್‌ವಾಲಾ ಗಡೀಪಾರು
ಪೆರೀರಾಗೆ 3 ವರ್ಷ ಕಠಿಣ ಶಿಕ್ಷೆ
ವರದಕ್ಷಿಣೆ ಹತ್ಯೆ:ಅಳಿಯನ ವಿರುದ್ಧ ದೂರು
ಸೆಪ್ಟೆಂಬರ್ 9ರ ಬಳಿಕ ಸಮಿತಿ ಸಭೆ