1993ರ ಮುಂಬೈ ಸರಣಿ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಶುಕ್ರವಾರ ಮೆಮನ್ ಕುಟುಂಬದ ನಾಲ್ವರಿಗೆ ಮಧ್ಯಂತರ ಜಾಮೀನು ನೀಡಿದೆ.
ಮುಖ್ಯನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಅರಿಜಿತ್ ಪಸಾಯತ್ ಮತ್ತು ಪಿ. ಸಥಾಶಿವಮ್ ಅವರಿದ್ದ ಪೀಠವು, ಆರೋಪಿಗಳಿಗೆ ತೀರ್ಪಿನ ಪ್ರತಿಗಳನ್ನು ನೀಡಿಲ್ಲ ಎಂಬ ಕಾರಣದ ಮೇಲೆ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಗೆ ಆದೇಶ ನೀಡಿದೆ.
ಈ ಸಂದರ್ಭದಲ್ಲಿ ಟಾಡಾ ಕೋರ್ಟ್ ನೀಡುವ ತೀರ್ಪಿನ ಪ್ರತಿಗಳನ್ನು ಸ್ವೀಕರಿಸಿದ ಕೂಡಲೇ ಶರಣಾಗಬೇಕೆಂದು ಪೀಠ ಆರೋಪಿಗಳಿಗೆ ತಿಳಿಸಿತು. 2006 ಸೆ.12ರಂದು ಪ್ರಕಟಿಸಲಾದ ಶಿಕ್ಷೆಯಲ್ಲಿ ತಮಗೆ ತೀರ್ಪಿನ ಪ್ರತಿಯನ್ನು ನೀಡಿಲ್ಲ ಎನ್ನುವ ಆಧಾರದ ಮೇಲೆ ಮಧ್ಯಂತರ ಜಾಮೀನು ನೀಡಬೇಕೆಂದು ಟೈಗರ್ ಮೆಮನ್ ಸೋದರರಾದ ಯುಸುಫ್ ಮತ್ತು ಎಸ್ಸಾ, ಅವನ ಸೊಸೆ ರುಬೀನಾ ಮೆಮನ್ ಕೋರಿದ್ದರು.
ಐದು ವರ್ಷಗಳ ಶಿಕ್ಷೆ ಜಾರಿಯಾದ ಮೂವರು ಮೆಮನ್‌ಗಳು ಮತ್ತು ಇನ್ನೊಬ್ಬ ಮಹಿಳೆ ಮುಬಿನಾ ಭಿವಂಡಿವಾಲಾ ಚಿತ್ರನಟ ಸಂಜಯ್ ದತ್‌ಗೆ ಜಾಮೀನು ನೀಡಿದಂತೆ ತಮಗೂ ನೀಡಬೇಕೆಂದು ಕೋರಿಕೆಯಲ್ಲಿ ತಿಳಿಸಿದ್ದರು.
|