ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಕಂಟೆಂಟ್ ಕೋಡ್ ಬೇಕಿಲ್ಲ: ಸಂಪಾದಕ ಮಂಡಳಿ
ಮಾಧ್ಯಮದ ಮೇಲೆ ಹಿಡಿತ ಸಾಧಿಸುವ ಯತ್ನಕ್ಕೆ ಹಿನ್ನಡೆ
ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸರಕಾರ ತಲೆಕೆಡಿಸಿಕೊಳ್ಳುವುದು ಆಗಲಿ, ಮಾಧ್ಯಮಗಳ ಮೇಲೆ ನಿಯಂತ್ರಣ ಸಾಧಿಸುವ ಪ್ರಯತ್ನವನ್ನು ತಾನು ಸಹಿಸುವುದಿಲ್ಲ ಎಂದು ಸುದ್ದಿ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮದ ಸಂಪಾದಕರು ಹೇಳಿದ್ದಾರೆ.

ಸುದ್ದಿ ವಿದ್ಯುನ್ಮಾನ ಮಾಧ್ಯಮಗಳಿಗೆ ಸಂಬಂಧಿಸಿದಂತೆ ಸರಕಾರ ಕಂಟೆಂಟ್ ಕೋಡ್ ಬಿಲ್‌ನ್ನು ಸಂಸತ್ತಿನಲ್ಲಿ ಪಾಸು ಮಾಡುವ ಮುನ್ನ ಮಾಧ್ಯಮ ವಲಯದ ಪ್ರತಿನಿಧಿಗಳೊಂದಿಗೆ ಸರಕಾರ ನಡೆಸಿದ ಮಾತುಕತೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ. ವಿದ್ಯುನ್ಮಾನ ಮಾಧ್ಯಮ ಬಿತ್ತರಿಸುವ ಸುದ್ದಿ ಮತ್ತು ಸುದ್ದಿ ಸಂಬಂಧಿತ ವಿಷಯಗಳಿಗೆ ಸಂಬಂಧಪಟ್ಟಂತೆ ತಾನೇ ನೀತಿ ಸಂಹಿತೆ ಪಾಲಿಸುತ್ತದೆ ಈ ವಿಚಾರದಲ್ಲಿ ಸರಕಾರ ತಲೆ ತೂರಿಸುವ ಅಗತ್ಯ ಇಲ್ಲ ಎಂದು ಹೇಳಿದೆ.

ಪ್ರಸಾರ ಸೇವೆ ನಿಯಂತ್ರಣ ಕಾಯಿದೆ ಜಾರಿಗೆ ಒಂದು ವರ್ಷದ ಅವಕಾಶ ನೀಡಬೇಕೆಂದು ದೃಶ್ಯ ಮಾಧ್ಯಮ ಸರಕಾರವನ್ನು ಕೇಳಿಕೊಂಡಿದೆ. 12 ತಿಂಗಳ ಅವಧಿ ನೀಡಲು ಸಾಧ್ಯವಿಲ್ಲ. ಸುದ್ದಿ ಪ್ರಸಾರ ಮತ್ತು ವಿಷಯಕ್ಕೆ ಸಂಬಂಧಿಸಿದಂತೆ ಸರಕಾರ ಯೋಚಿಸಿರುವ ಕಂಟೆಂಟ್ ಕೋಡ್ ಜಾರಿ ಕುರಿತು ಪುನಃ ವಿಚಾರ ಮಾಡುತ್ತೆನೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಿಯರಂಜನ್ ದಾಸ್ ಮುನ್ಷಿ ಭರವಸೆ ನೀಡಿದ್ದಾರೆ.

ಕಂಟೆಂಟ್ ಕೋಡ್ ಮಸೂದೆಗೆ ಎಡಿಟರ್ಸ್ ಗಿಲ್ಡ್ ಭಾರಿ ವಿರೋಧ ವ್ಯಕ್ತಪಡಿಸಿ, ಮಸೂದೆಯ ಜಾರಿಯಿಂದ ಸರಕಾರ ದೃಶ್ಯ ಮಾಧ್ಯಮಗಳ ಮೇಲೆ ನಿಯಂತ್ರಣ ಸಾಧಿಸಲು ಅನುಕೂಲವಾಗುತ್ತದೆ. ದ್ವೇಷದಿಂದ ಟಿ ವಿ ಚಾನೆಲ್‌ಗಳನ್ನು ಶಿಕ್ಷಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ದೃಶ್ಯ ಮಾಧ್ಯಮವನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಸರಕಾರ ಕಂಟೆಂಟ್ ಮಸೂದೆಯನ್ನು ಸಿದ್ದಪಡಿಸಿ, ಅಭಿಪ್ರಾಯ ವ್ಯಕ್ತಪಡಿಸುವಂತೆ ಸಂಬಂಧಪಟ್ಟ ಮಾಧ್ಯಮದ ಪ್ರತಿನಿಧಿಗಳು ಮತ್ತು ಮುದ್ರಣ ಮಾಧ್ಯಮದ ಸಂಪಾದಕರುಗಳನ್ನು ಕೇಳಿಕೊಂಡಿತ್ತು.

ಒಟ್ಟಾರೆ ಮಸೂದೆಯನ್ನು ತಿರಸ್ಕರಿಸಿರುವ ಮುದ್ರಣ ಮತ್ತು ದೃಶ್ಯ ಮಾಧ್ಯಮದ ಪ್ರತಿನಿಧಿಗಳು ಟಿ ವಿ ಚಾನೆಲ್‌ಗಳ ಮೇಲೆ ಸರಕಾರದ ನಿಯಂತ್ರಣ ಬೇಕಿಲ್ಲ. ತಾನೇ ನೀತಿ ಪತ್ರಿಕೊದ್ಯಮದ ನೀತಿ ಸಂಹಿತೆಯನ್ನು ಅನುಸರಿಸಲು ಸಮರ್ಥವಾಗಿದೆ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ರೀತಿಯಲ್ಲಿ ಸುದ್ದಿ ವಾಹಿನಿಗಳ ಪ್ರಸಾರ ಮಂಡಳಿ ಸ್ಥಾಪನೆಯಾಗಬೇಕು ಎಂದು ಕೇಳಿಕೊಂಡಿವೆ.
ಮತ್ತಷ್ಟು
ಮೆಮನ್‌ಗಳಿಗೆ ಮಧ್ಯಂತರ ಜಾಮೀನು
ಸರ್ಕಾರದ ಅಸ್ಥಿರತೆ ಇಲ್ಲ:ಕಾರಟ್
ಸ್ಫೋಟ:ಮೂವರ ಸಾವು, ರೆಡ್ಡಿ ಪಾರು
ವಕೀಲರು ಕಡ್ಡಾಯ:ಸುಪ್ರೀಂಕೋರ್ಟ್ ತೀರ್ಪು
ಅಣು ಒಪ್ಪಂದ: ಲೋಕಸಭೆಯಲ್ಲಿ ಸೋಮವಾರ ಚರ್ಚೆ
ದಾವೂದ್ ಸಹಚರ ಅಟ್ಟರ್‌ವಾಲಾ ಗಡೀಪಾರು