ಭಾರತ-ಅಮೆರಿಕ ಪರಮಾಣು ಒಪ್ಪಂದದ ವಿವಾದ ಭುಗಿಲೆದ್ದಿರುವ ನಡುವೆ, ಮನಸ್ಸಿನಲ್ಲಿ ಕೆಲವು ಭೂತಗಳ ಭಯ ಇಟ್ಟುಕೊಂಡು ರಾಷ್ಟ್ರ ಹಿಂಜರಿಯಬಾರದು ಎಂದು ಪ್ರಧಾನಮಂತ್ರಿ ಮನಮೋಹನ ಸಿಂಗ್ ಶುಕ್ರವಾರ ತಿಳಿಸಿದರು.
ಸ್ವಾತಂತ್ರ್ಯದ ಮೊದಲ ದಶಕದಲ್ಲಿ ನೋಡಿದಂತೆ ಜಗತ್ತು ಭಾರತದತ್ತ ನವೀಕೃತ ಆಸೆಯಿಂದ ನೋಡುತ್ತಿದೆ. ಇದು ನಮ್ಮ ಕ್ಷಣವಾಗಿದ್ದು, ನಾವು ಮನಸ್ಸಿನಲ್ಲಿ ಕೆಲವು ಭೂತಗಳ ಭಯ ಇಟ್ಟುಕೊಂಡು ಹಿಂದೆ ಹೆಜ್ಜೆಹಾಕಬಾರದು ಎಂದುಪ್ರಧಾನಿ ನುಡಿದರು.
ಮಧ್ಯಪ್ರದೇಶದ ರಾಜ್ಯಪಾಲ ಬಲರಾಮ್ ಜಾಖಡ್ ಅವರ 85ನೇ ಹುಟ್ಟುಹಬ್ಬದ ಪ್ರಯುಕ್ತ ಅವರನ್ನು ಅಭಿನಂದಿಸುತ್ತಾ ಪ್ರಧಾನಿ ಮಾತನಾಡುತ್ತಿದ್ದರು.ನಮ್ಮ ಜನರು ನಮ್ಮಿಂದ ಮಹತ್ತರವಾದುದನ್ನು ನಿರೀಕ್ಷಿಸಿದ್ದಾರೆ. ಇನ್ನೂ ಅವರು ಪ್ರಜಾತಂತ್ರ ಸಂಸ್ಥೆಗಳಲ್ಲಿ ನಂಬಿಕೆ ಇರಿಸಿದ್ದಾರೆ ಎಂದು ಸಿಂಗ್ ಹೇಳಿದರು.
ಜಾಖಡ್ ಉನ್ನತ ವ್ಯಕ್ತಿತ್ವದವರು ಎಂದು ಬಣ್ಣಿಸಿದ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಯಾವುದೇ ಸ್ಥಾನದಲ್ಲಿ ಕೆಲಸ ಮಾಡಿರಲಿ, ಆ ಸ್ಥಾನಕ್ಕೆ ಗೌರವ, ಪ್ರತಿಷ್ಠೆ ತಂದಿದ್ದಾರೆ ಎಂದು ಶ್ಲಾಘಿಸಿದರು.
|