ಆಂಧ್ರದ ಮಾಜಿ ಮುಖ್ಯಮಂತ್ರಿ ಎನ್ ಜನಾರ್ಧನ್ ರೆಡ್ಡಿ ಮತ್ತು ಅವರ ಪತ್ನಿ ರಾಜಲಕ್ಷ್ಮಿ ಅವರನ್ನು ಹತ್ಯೆಗೈಯ್ಯುವ ಸಲುವಾಗಿ, ನೆಲ್ಲೊರ್ ಬಳಿ ಸ್ಫೋಟಿಸಿದ್ದ ಬಾಂಬ್‌ನಲ್ಲಿ ಅಮೋನಿಯಂ ನೈಟ್ರೇಟ್‌ನ್ನು ಬಳಸಲಾಗಿದೆ ಎಂದು ಆಂಧ್ರ ಪೊಲೀಸರು ತಿಳಿಸಿದ್ದಾರೆ.
ತಿರುಪತಿಯಲ್ಲಿ ಘಟಿಕೋತ್ಸವ ಸಮಾರಂಭಕ್ಕೆ ಹೋಗುತ್ತಿದ್ದ ಮಾಜಿ ಮುಖ್ಯಮಂತ್ರಿಯನ್ನು ಗುರಿಯಾಗಿರಿಸಿಕೊಂಡು ಅವರನ್ನು ಹತ್ಯೆಗೈಯ್ಯುವ ಉದ್ದೇಶದಿಂದ ಶುಕ್ರವಾರ ಸಂಭವಿಸಿದ್ದ ನೆಲ್ಲೊರ್ ಬಳಿ ಬಾಂಬ್ ಸ್ಫೋಟದಲ್ಲಿ, ನಕ್ಸಲ್‌ರು ಅಮೋನಿಯಂ ನೈಟ್ರೇಟ್‌ನ್ನು ಬಳಸಿದ್ದು ತನಿಖೆಯಿಂದ ದೃಢಪಟ್ಟಿದೆ ಎಂದು ಆಂಧ್ರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಾರೆಡ್ಡಿ ತಿಳಿಸಿದ್ದಾರೆ.
ಆಗಸ್ಟ್ 25ರಂದು ಸಂಭವಿಸಿದ ಹೈದರಾಬಾದ್ ಸ್ಫೋಟಕ್ಕೂ ಇದೇ ಸ್ಫೋಟಕವನ್ನು ಬಳಸಲಾಗಿದ್ದು, ನೆಲ್ಲೊರ್ ಸ್ಫೋಟದ ಸ್ಥಳದಲ್ಲಿ 200ಮೀಟರ್ ಉದ್ದ ವೈರ್, ಪ್ಲಾಸ್ಟಿಕ್ ಬಕೆಟ್ ಮತ್ತು ಟ್ಯೂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದವರು ಹೇಳಿದ್ದಾರೆ.
ಹದಿನೈದು ದಿನಗಳ ಅಂತರದಲ್ಲಿ ಆಂಧ್ರಪ್ರದೇಶದಲ್ಲಿ ಎರಡೂ ಭೀಕರ ಬಾಂಬ್ ಸ್ಫೋಟಗಳು ರಾಜ್ಯದ ಜನತೆಯನ್ನು ತಲ್ಲಣಗೊಳಿಸಿದ್ದು, ಪೊಲೀಸರು ವ್ಯಾಪಕ ತನಿಖೆ ಕೈಗೊಂಡಿದ್ದಾರೆ.
|