ಆಂಧ್ರ ಪ್ರದೇಶದ ರಾಜಧಾನಿ ಹೈದರಾಬಾದಿನಲ್ಲಿ ಅವಳಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ, ವೆಲ್ಲೊರಿನಲ್ಲಿ ಶಂಕಿತ ಮಹಿಳೆಯೊರ್ವಳನ್ನು ಪೊಲೀಸರು ಬಂಧಿಸಿದ್ದು. 27ವರ್ಷದ ಕಾಲೇಜ್ ವಿದ್ಯಾರ್ಥಿನಿ, ರಫ್ಜಾನಿ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದು, ಅವಳು ವಾಸವಾಗಿದ್ದ ಮನೆಯಿಂದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿತಿಳಿಸಿದ್ದಾರೆ.
ವೆಲ್ಲೊರಿನ ಅವಳ ಮನೆಯಲ್ಲಿ ಸ್ಫೋಟಕ್ಕೆ ಸಂಬಂಧಿಸಿದಂತೆ ಹಲವು ಮಹತ್ವದ ದಾಖಲೆಗಳು ಸಿಕ್ಕ ಹಿನ್ನೆಲೆಯನ್ನು ಅವಳನ್ನು ವೆಲ್ಲೊರಿಗೆ ಕರೆತಂದು ತನಿಖೆಯನ್ನು ತೀವ್ರಗೊಳಿಸಿದ್ದಾರೆಂದು ಆಂಧ್ರದ ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇದೇ ವೇಳೆ ರಫ್ಜಾನಿ ಅವರ ತಂದೆ 2004ರಲ್ಲಿ ವೆಲ್ಲೊರಿನ ಪ್ರಮುಖ ಲಾಡ್ಜ್‌ವೊಂದರಲ್ಲಿ ಹಲವು ತಿಂಗಳುಗಳ ಕಾಲ ತಂಗಿದ್ದರ ಹಿನ್ನೆಲೆಯಲ್ಲಿ, ಲಾಡ್ಜ್‌ನ್ನು ಸಹ ತೀವ್ರ ತಪಾಸಣೆಗೆ ಒಳಪಡಿಸಲಾಗಿದೆ ಎಂದು ವೆಲ್ಲೊರ್ ಪಿಎಸ್‌ಐ ಮಹೇಂದ್ರನ್ ತಿಳಿಸಿದ್ದಾರೆ
|