ಆದಾಯಕ್ಕಿಂತಲೂ ಅಧಿಕ ಆಸ್ತಿ ಪಾಸ್ತಿ ಮೌಲ್ಯವನ್ನು ಹೊಂದಿದ್ದ ಹಿನ್ನೆಲೆಯಲ್ಲಿ ಪಂಜಾಬ್ ರಾಜ್ಯದ ಮಾಜಿ ಡಿಜಿಪಿ ಎಸ್ ಎಸ್ ವಿರ್ಕ್ ಅವರನ್ನು ಪಂಜಾಬ್ ಜಾಗೃತ ದಳ ಪೊಲೀಸರು ಬಂಧಿಸಿದ್ದಾರೆ.
ಪಂಜಾಬ್‌ನಲ್ಲಿ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಗಿಂತಲೂ ಸ್ವಲ್ಪ ಸಮಯದ ಮುಂಚೆ ಡಿಜಿಪಿ ಹುದ್ದೆಯಿಂದ ಸರಕಾರ ಅವರನ್ನು ವಜಾಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಮಾಜಿ ಡಿಜಿಪಿ ಅವರು ಮಹಾರಾಷ್ಟ್ರಾದ ಸದಾನ್ ಎಂಬಲ್ಲಿ ನೆಲೆಸಿದ್ದಾರೆ ಎನ್ನುವ ಖಚಿತ ಮಾಹಿತಿಯನ್ನಾಧರಿಸಿ ಪಂಜಾಬ್ ಜಾಗೃತ ದಳ ಶನಿವಾರ ಅವರನ್ನು ಬಂಧಿಸಿದೆ.
ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆಯಡಿ ಅವರ ವಿರುದ್ಧ ಪ್ರಕಣರ ದಾಖಲಾಗಿದ್ದು, ಮಹಾರಾಷ್ಟ್ರಕ್ಕೆ ಸೇರಿದ ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ಇವರ ವಿರುದ್ಧ ಪಂಜಾಬ್ ಸರಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಪಂಜಾಬ್ ಪೊಲೀಸ್ ಮೂಲಗಳು ಹೇಳಿವೆ.
ಶನಿವಾರ ಸಂಜೆಯೇ ಅವರನ್ನು ಪಂಜಾಬ್ ರಾಜಧಾನಿ ಚಂಡಿಗಢ್‌ಕ್ಕೆ ಕರೆತಂದಿದ್ದು, ಖರಾರ್ ನ್ಯಾಯಾಲಯದೆದುರು ಹಾಜರು ಪಡಿಸಲಾಗಿದೆ ಎಂದು ಜಾಗೃತ ದಳದ ಮೂಲಗಳು ತಿಳಿಸಿವೆ.
|